Breaking NewsLatestಕಲಬುರ್ಗಿಜಿಲ್ಲಾ ಸುದ್ದಿರಾಜಕೀಯರಾಜ್ಯಸುದ್ದಿ

ಇಬ್ರಾಹಿಂ ಪಕ್ಷ ಬಿಟ್ಟಿದ್ದರಿಂದ ಯಾವ ತೊಂದರೆ ಇಲ್ಲ: ಆಪ್ತನ ಕೈಬಿಟ್ಟ ಸಿದ್ದರಾಮಯ್ಯ

ಕಲಬುರಗಿ: ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷ ತೊರೆಯೋದ್ರಿಂದ ಪಕ್ಷಕ್ಕೆ ಏನು ತೊಂದರೆ ಆಗಲ್ಲ ಅಂತ ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತನಾಗಿದ್ದ ಸಿಎಂ ಇಬ್ರಾಹಿಂ ಕೈ ಬಿಟ್ಟಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅನೇಕರು ಸೇರ್ತಾರೆ, ಅನೇಕರು ಬಿಟ್ಟು ಹೋಗ್ತಾರೆ. ಇದರಿಂದ ಪಕ್ಷಕ್ಕೆ ಏನು ತೊಂದರೆ ಆಗಲ್ಲ, ಸಿಎಂ ಇಬ್ರಾಹಿಂ ಕೂಡ ಪಕ್ಷ ಬಿಟ್ಟು ಹೋದ್ರು ಏನು ತೊಂದರೆ ಇಲ್ಲ, ಇಬ್ರಾಹಿಂ ನನಗೆ ಮೊದಲು ಸ್ನೇಹಿತ‌ ಮುಂದೆಯೂ ಸ್ನೇಹಿತನಾಗಿ ಇರ್ತಾರೆ. ಆದ್ರೆ ಇಬ್ರಾಹಿಂ ರಾಜೀನಾಮೆಯಿಂದ ಪಕ್ಷಕ್ಕೆ ಏನು ತೊಂದರೆ ಆಗಲ್ಲ ಎಂದರು.

ಯಾರ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಪರಿಣಾಮ ಆಗಲ್ಲಾ ನಾನು ಬಿಟ್ರು ಪಕ್ಷಕ್ಕೆ ಏನು ಡ್ಯಾಮೇಜ್ ಆಗಲ್ಲಾ ಅಂತ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button