Breaking NewsLatestರಾಜಕೀಯರಾಷ್ಟ್ರೀಯ

ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್​: ಹೈಕೋರ್ಟ್ ಅನುಮತಿಯಿಲ್ಲದೆ ಹಿಂತೆಗೆದುಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸಂಬಂಧಿತ ಹೈಕೋರ್ಟ್​ನ ಪೂರ್ವಾನುಮತಿಯಿಲ್ಲದೆ ಹಿಂತೆಗೆದುಕೊಳ್ಳುವಂತಿಲ್ಲ ಎಂಬ ಮಹತ್ವದ ಆದೇಶವನ್ನು ಸುಪ್ರಿಂ ಕೋರ್ಟ್ ಹೊರಡಿಸಿದೆ.

ಇಂಥ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಮುಂದಿನ ಆದೇಶದವರೆಗೂ ಸೇವೆಯಲ್ಲಿ ಮುಂದುವರಿಯಬೇಕು ಎಂದೂ ಮಂಗಳವಾರದ ಆದೆಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ಸಿಜೆಐ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿನೀತ್ ಶರಣ್

ಸಿಜೆಐ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿನೀತ್ ಶರಣ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ವಿಚಾರದಲ್ಲಿ ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯ ಅವರ ಸಲಹೆಯನ್ನು ಅಂಗೀಕರಿಸಿತು.

ಸಂಸದರು ಮತ್ತು ಶಾಸಕರ ವಿರುದ್ಧದ ಬಾಕಿಯಿರುವ ಮತ್ತು ವಿಲೇವಾರಿಯಾಗಿರುವ ಕೇಸ್​ಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ವಿವರಗಳನ್ನು ಸಲ್ಲಿಸುವಂತೆಯೂ ಎಲ್ಲಾ ಹೈಕೋರ್ಟ್​ಗಳ ಪ್ರಧಾನ ರಿಜಿಸ್ಟ್ರಾರ್​ಗಳಿಗೆ ಸೂಚಿಸಿತು.

ಸಿಬಿಐ ಮತ್ತು ವಿಶೇಷ ಕೋರ್ಟ್​ಗಳಲ್ಲಿ ಅಂಥ ಕೇಸ್​ಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಮುಂದಿನ ಆದೇಶದವರೆಗೂ ಸೇವೆಯಲ್ಲಿ ಮುಂದುವರಿಯುವಂತೆ ಪೀಠ ಹೇಳಿತು.

ಸಂಸದರು ಮತ್ತು ಶಾಸಕರ ವಿರುದ್ಧದ ಬಾಕಿಯಿರುವ ಪ್ರಕರಣಗಳನ್ನು ವಿಶೇಷ ಕೋರ್ಟ್ ರಚಿಸುವ ಮೂಲಕ ತ್ವರಿತ ವಿಚಾರಣೆಗೆ ಅನುವು ಮಾಡುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನ್​ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ ಈ ಆದೇಶ ನಿಡಿದೆ.

ಇದನ್ನೂ ಓದಿ: ಸಂಸದರು ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್: ಎರಡೇ ವರ್ಷಗಳಲ್ಲಿ ಶೇ.17 ಹೆಚ್ಚಳ

ಸಂಸದರು ಮತ್ತು ಶಾಸಕರ ವಿರುದ್ಧದ ಕೇಸ್​ಗಳ ವಿಚಾರಣೆ ಯಾವ ಹಂತದಲ್ಲಿದೆ ಎಂಬುದರ ಕುರಿತು ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯ ವರದಿಯೊಂದನ್ನು ಸಲ್ಲಿಸಿದ್ದರು. ಪ್ರಕರಣ ಹಿಂತೆಗೆತಕ್ಕೆ ಹೈಕೋರ್ಟ್​ ಪೂರ್ವಾನುಮತಿ ಅಗತ್ಯ ಎಂಬುದೂ ಸೇರಿದಂತೆ ಹಲವು ಸಲಹೆಗಳನ್ನು ಅವರು ತಮ್ಮ ವರದಿಯಲ್ಲಿ ನೀಡಿದ್ದರು.

ಇದನ್ನೂ ಓದಿ: ಅಭ್ಯರ್ಥಿ ಆಯ್ಕೆಯಾದ 48 ಗಂಟೆಗಳೊಳಗೆ ಅಪರಾಧ ದಾಖಲೆ ಬಹಿರಂಗ; ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

Spread the love

Related Articles

7 Comments

  1. We’re a gaggle of volunteers and starting a new scheme in our
    community. Your site provided us with helpful info to work on. You’ve performed a formidable activity and our entire community can be thankful to you.

  2. Greetings from Ohio! I’m bored to tears at work so I decided to browse your website on my
    iphone during lunch break. I enjoy the information you present here and can’t wait to take a
    look when I get home. I’m amazed at how quick your blog loaded on my mobile ..
    I’m not even using WIFI, just 3G .. Anyhow, great site!

  3. Heya i’m for the first time here. I came across this board and I find It really
    useful & it helped me out a lot. I hope to give something back and aid others
    like you helped me.

Leave a Reply

Your email address will not be published. Required fields are marked *

Back to top button