Breaking Newsಇತರ ಕ್ರೀಡೆಕ್ರೀಡೆ
Tokyo Paralympics : ನಿಶಾದ್ ಕುಮಾರ್ ಗೆ ಬೆಳ್ಳಿ

ಟೋಕಿಯೋ : ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಎರಡನೇ ಪದಕ. ಹೈಜಂಪ್ ನಲ್ಲಿ 2.06 ಮೀ. ಎತ್ತರಕ್ಕೆ ಜಿಗಿಯುವ ಮೂಲಕ ನಿಶಾದ್ ಬೆಳ್ಳಿ ಪದಕ ಗೆದ್ದರು.
ಟಿ47 ಹೈಜಂಪ್ ವಿಭಾಗದಲ್ಲಿ ಏಷ್ಯನ್ ದಾಖಲೆ ಹೊಂದಿರುವ ನಿಶಾದ್ 2.06 ಮೀ. ಎತ್ತರಕ್ಕೆ ನೆಗೆದದ್ದು ಮತ್ತೊಂದು ಏಷ್ಯನ್ ದಾಖಲೆಯಾಗಿದೆ. ಭಾರತ ಈಗ ಒಟ್ಟು ಎರಡು ಬೆಳ್ಳಿ ಪದಕಗಳ ಸಾಧನೆ ಮಾಡಿದೆ.
ಹಿಮಾಚಲ ಪ್ರದೇಶದಲ್ಲಿ ದೈಹಿಕ ಶಿಕ್ಷಣದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ನಿಶಾದ್ ಗೆ ಒಂದೇ ಕೈ.
