Breaking NewsLatestಮೆಟ್ರೋರಾಜ್ಯರಾಷ್ಟ್ರೀಯವಾಣಿಜ್ಯಸುದ್ದಿ

ಚಿಕ್ಕ ಮತ್ತು ಚೊಕ್ಕ ಬಜೆಟ್ ಭಾಷಣ ಮಾಡಿದ ನಿರ್ಮಲಾ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿದ 2022-23 ನೇ ಸಾಲಿನ ಚಿಕ್ಕ ಮತ್ತು ಚೊಕ್ಕ ಬಜೆಟ್ ಭಾಷಣ ಮುಕ್ತಾಯಗೊಂಡಿದೆ. ಸರಿ ಸುಮಾರು 90 ನಿಮಿಷ ಅವಧಿಯ ಬಜೆಟ್ ಭಾಷಣ ಇದಾಗಿತ್ತು. 2020ರಲ್ಲಿ ದಾಖಲೆಯ ಅಂದರೆ ಬರೋಬ್ಬರಿ ಎರಡು ಗಂಟೆಯ ಬಜೆಟ್ ಭಾಷಣವನ್ನು ಅವರು ಮಂಡಿಸಿದ್ದರು.

ಲೋಕಸಭೆ ಅಧ್ಯಕ್ಷ ಓಂಬಿರ್ಲಾ ಸೂಚನೆ ಮೇರೆಗೆ ವಿಧೇಯಕ ಮಂಡನೆ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಬಜೆಟ್ ಭಾಷಣ ಆರಂಭಿಸಿದ್ದರು.  ಬಜೆಟ್ ಭಾಷಣದಲ್ಲಿ ತೆರಿಗೆ ವಿಚಾರ ಪ್ರಸ್ತಾಪಿಸುವಾಗ ಮಹಾಭಾರತದ ಉಲ್ಲೇಖ ಹೊರತುಪಡಿಸಿದರೆ ಯಾವುದೇ ಕಾವ್ಯ ಅಥವಾ ಕೋಟ್ ಗಳನ್ನು ಅವರು ಉಲ್ಲೇಖಿಸಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಇದು ನಾಲ್ಕನೇ ಬಜೆಟ್ ಭಾಷಣ ಮತ್ತು ಮೋದಿ ಸರ್ಕಾರದ 10 ನೇ ಬಜೆಟ್ ಇದಾಗಿತ್ತು. ಕೊರೋನಾ ಕಾರಣ ಬಜೆಟ್ ಪ್ರತಿ ಬದಲು ಡಿಜಿಟಲ್ ರೂಪದಲ್ಲಿ ಬಜೆಟ್ ಮಂಡನೆಯಾಗಿದ್ದು ಈ ಬಾರಿಯ ವಿಶೇಷ.

Spread the love

Related Articles

Leave a Reply

Your email address will not be published. Required fields are marked *

Back to top button