Breaking NewsLatestರಾಷ್ಟ್ರೀಯ

ಕೇರಳದಲ್ಲಿ ನಿಫಾ ವೈರಸ್; 11 ಮಂದಿಯಲ್ಲಿ ಸೋಂಕಿನ ಲಕ್ಷಣ

ಕೇರಳದ ಕೋಯಿಕೋಡ್‌ನಲ್ಲಿ ನಿಫಾ ವೈರಸ್ ಸೋಂಕಿಗೆ ಬಾಲಕ ಮೃತಪಟ್ಟಿದ್ದು, ಅವರ ತಾಯಿ ಸೇರಿದಂತೆ 11 ಮಂದಿಗೆ ಸೋಂಕಿನ ಲಕ್ಷಣಗಳು ಕಾಣಿಸಿವೆ.
ನಿಫಾ ವೈರಸ್ ಸೋಂಕಿಗೆ ಒಳಗಾಗಿರುವ ಲಕ್ಷಣಗಳಿರುವ ಎಲ್ಲರ ಮಾದರಿ ಕಲೆಹಾಕಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಬಾಲಕನ ಮನೆಯ ಸುತ್ತಮುತ್ತ ಪಶುಸಂಗೋಪನೆ ತಂಡ ಪರಿಶೀಲನೆ ನಡೆಸಿದೆ. ಅವರ ಮನೆಯ ಎರಡು ಆಡುಗಳಿಂದಲೂ ಮಾದರಿ ಸಂಗ್ರಹಿಸಲಾಗಿದೆ. ಬಾವಲಿಗಳ ಮನೆಯ ಬಳಿ ಇರುವ ಮರದ ಹಣ್ಣುಗಳನ್ನು ಕಚ್ಚಿರಬಹುದು ಎನ್ನುವ ಕಾರಣಕ್ಕೆ ಮರದ ಸ್ಯಾಂಪಲ್ ಕೂಡ ಪಡೆಯಲಾಗಿದೆ.

ಈಗಾಗಲೇ ರಾಜ್ಯ ಆರೋಗ್ಯ ಇಲಾಖೆ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ ಸಂಪರ್ಕಕ್ಕೆ ಬಂದ 251 ಮಂದಿಯನ್ನು ಗುರುತಿಸಿದೆ. ಅವುಗಳಲ್ಲಿ 54 ಮಂದಿ ರಿಸ್ಕ್‌ನಲ್ಲಿದ್ದಾರೆ.

ಯಾರಿಗಾದರೂ ರೋಗ ಲಕ್ಷಣಗಳು ಇವೆಯೇ? ಅಥವಾ ಸಂಪರ್ಕದಿಂದ ಹೊರಗುಳಿದಿದ್ದಾರಾ ಎಂದು ಪರೀಕ್ಷಿಸಲು ಇಂದಿನಿಂದ ಮನೆ ಮನೆ ಕಣ್ಗಾವಲು ನಡೆಸಲು ಪ್ರಾಂಭಿಸುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button