Breaking NewsLatestರಾಜ್ಯಸುದ್ದಿ

ಇನ್ಮುಂದೆ ಬಿಎ, ಬಿಎಸ್ಸಿ, ಬಿಕಾಂಗೂ ಎಂಟ್ರೆನ್ಸ್ ಎಕ್ಸಾಂ?

ಕಳೆದ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಈ ಬದಲಾವಣೆಗಳ ಬಗ್ಗೆ ಇಂದಿಗೂ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ಗೆ ತೆರಳಿ ಅಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಭಾರತಕ್ಕೆ ಹಿಂದಿರುಗಿದ ಮೇಲೆ ನೀಟ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಕೋರ್ಸ್ ಗಳ ಅಡಿಪಾಯ ಆಗಿರುವ ಪಿಯುಸಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಪ್ರಶ್ನೆಯೊಂದು ಶಿಕ್ಷಣ ಅಂಗಳದಲ್ಲಿ ಕೇಳಿ ಬರುತ್ತಿದೆ. ಇನ್ಮುಂದೆ ಪದವಿ ಪ್ರವೇಶಾತಿಗೆ ಪರೀಕ್ಷೆ ಆಂದ್ರೆ ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ವ್ಯವಸ್ಥೆ ಜಾರಿಯಾಗುತ್ತಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳ ಅಬ್ಬರದಲ್ಲಿ ಪಿಯುಸಿ ಕೇವಲ ವಿದ್ಯಾರ್ಹತೆಯಾಗಿ ಬದಲಾಗುವ ಸುಳಿವುಗಳು ಸಿಗ್ತಿವೆ.

ಸದ್ಯ ಕೇಂದ್ರ ಸರ್ಕಾರ ಬಿಎ, ಬಿಕಾಂ, ಬಿಎಸ್ಸಿ ಯಂತಹ ತಾಂತ್ರಿಕೇತರ ಶಿಕ್ಷಣಕ್ಕೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರಿ ಅಧೀನದ ಖಾಸಗಿ ಮತ್ತು ಡೀಮ್ಡ್ ವಿವಿಗಳಿಗೆ ವಿಸ್ತರಿಸಲು ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ ಮುಂದಾಗಿದ್ದು, ಈ ಸಂಬಂಧ ಕಾರ್ಯತತ್ಪರವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button