Taliban New Govt: ತಾಲಿಬಾನ್ ಸರ್ಕಾರದಲ್ಲಿ ಮುಲ್ಲಾ ಮೊಹಮ್ಮದ್ ಹಸನ್ ಪ್ರಧಾನಿ

ಕಾಬೂಲ್ : ಅಫ್ಘಾನಿನಲ್ಲಿ ತಾಲಿಬಾನಿಗಳ ಸರ್ಕಾರ ಸ್ಥಾಪನೆಯಾಗಿದ್ದು, ಮುಲ್ಲಾ ಮೊಹಮ್ಮದ್ ಹಸನ್ ನೂತನ ಪ್ರಧಾನಿಯನ್ನಾಗಿ ತಾಲಿಬಾನ್ ಘೋಷಿಸಿದೆ.
ಉಪಪ್ರಧಾನಿಯಾಗಿ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಘನಿ ಬರಾದಾರ, ಗೃಹ ಸಚಿವ ಸಿರಾಜುದ್ದೀನ್ ಹಕ್ಕಾನಿ, ರಕ್ಷಣಾ ಸಚಿವ ಮೊಹ್ಮದ್ ಯಾಕಬ್ ಮುಜಾಹಿದ್, ಹಣಕಾಸು ಸಚಿವ ಹಿದಾಯತುಲ್ಲಾ ಬದ್ರಿ ಎಂದು ಘೋಷಿಸಲಾಗಿದೆ ಎಂದು ಮುಖ್ಯ ವಕ್ತಾರ ಝಬೀವುಲ್ಲಾ ಮುಜಾಹಿದ್ ತಿಳಿಸಿರುವುದು ವರದಿಯಾಗಿದೆ.
ಸಂಪೂರ್ಣ ಪಟ್ಟಿ ಇಲ್ಲಿದೆ:
ಉಪ ಪ್ರಧಾನಿ 1 ಮುಲ್ಲಾ ಬರದಾರ್
ಡೆಪ್ಯುಟಿ ಪಿಎಂ 2 ಅಬ್ದುಲ್ ಸಲಾಮ್ ಹನಾಫಿ
ಗೃಹ ಸಚಿವ – ಸಿರಾಜುದ್ದೀನ್ ಹಕ್ಕಾನಿ
ರಕ್ಷಣಾ ಸಚಿವ – ಮೊಹಮ್ಮದ್ ಜಾಕೋಬ್ ಮುಜಾಹಿದ್
ಹಣಕಾಸು ಸಚಿವ – ಮುಲ್ಲಾ ಹಿದಾಯತುಲ್ಲಾ ಬದರಿ
ವಿದೇಶಾಂಗ ವ್ಯವಹಾರಗಳ ಸಚಿವ – ಮೌಲ್ವಿ ಅಮೀರ್ ಖಾನ್ ಮುಕ್ಕಿ
ಶಿಕ್ಷಣ ಸಚಿವ – ಶೇಖ್ ಮೌಲ್ವಿ ನೂರುಲ್ಲಾ ಮುನೀರ್
ನಿರಾಶ್ರಿತರ ವ್ಯವಹಾರಗಳ ಸಚಿವ – ಖಲೀಲುರ್ ರಹಮಾನ್ ಹಕ್ಕ್ನಿ
ಉಪ ವಿದೇಶಾಂಗ ಸಚಿವ – ಶೇರ್ ಮೊಹಮ್ಮದ್ ಸ್ಟೆನೆಕ್ಜಾಯ್
ಸಂಸ್ಕೃತಿ ಉಪ ಸಚಿವ – ಜಬೀವುಲ್ಲಾ ಮುಜಾಹಿದ್
ರಕ್ಷಣಾ ಸಚಿವಾಲಯದ ಸೇನಾ ಸಿಬ್ಬಂದಿ ಮುಖ್ಯಸ್ಥ- ಖರಿ ಫಸಿಹುದ್ದೀನ್
ಸೇನಾ ಮುಖ್ಯಸ್ಥ – ಮುಲ್ಲಾ ಫಜಲ್ ಅಖುಂದ್
ಗುಪ್ತಚರ ಉಪ ಮುಖ್ಯಸ್ಥ – ಮುಲ್ಲಾ ತಾಜ್ ಮೀರ್ ಜವಾದ್
ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ (ಎನ್ ಡಿಎಸ್) ಮುಖ್ಯಸ್ಥ – ಮುಲ್ಲಾ ಅಬ್ದುಲ್ ಹಕ್ ವಸಿಕ್
