Breaking NewsLatestಕ್ರೈಂಮೆಟ್ರೋರಾಜ್ಯರಾಷ್ಟ್ರೀಯಸುದ್ದಿ

ರೂಲ್ಸ್ ಬ್ರೇಕ್ ಮಾಡ್ಬೇಡಿ, ಮಾಡಿದ್ರೆ ನೀವೂ ಇಲ್ಲ, ನಿಮ್ಮ ಮನೆಯವರಿಗೆ ವಿಮೆ ಹಣವೂ ಇಲ್ಲ: ಸವಾರರೇ ಎಚ್ಚರ..!

ಅಪಘಾತ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಮೋಟಾರು ವಾಹನ ಕಾಯ್ದೆಗೆ ಕಠಿಣ ತಿದ್ದುಪಡಿ ತರಲಾಗಿದೆ. ಮೋಟಾರು ವಾಹನ ಕಾಯ್ದೆಗೆ ಲೋಕಸಭೆಯಲ್ಲಿ ತಿದ್ದುಪಡಿ ತರಲಾಗಿದೆ. ಇದೀಗ ಆ ನಿಯಮವನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ವಿಮಾ ಕಂಪೆನಿಗಳು ತೊಡಗಿವೆ.

ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಕ್ಕಿರುವುದರಿಂದ ಇನ್ನು ಮುಂದೆ ಹಳೆ ನಿಯಮ ಇರುವುದಿಲ್ಲ. ಹೊಸ ನಿಯಮದ ಪ್ರಕಾರ, ವಿಮಾ ಕಂಪನಿಗಳು ಮತ್ತು ಸಾರಿಗೆ ಇಲಾಖೆಯು ಈ ಕೆಳಗಿನವುಗಳನ್ನು ಜಾರಿಗೊಳಿಸಲು ಸಜ್ಜಾಗಿದೆ. ಯಾವ್ಯಾವ ತಪ್ಪು ಮಾಡಿದ್ರೆ ವಿಮೆ ಸಿಗಲ್ಲ ಗೊತ್ತಾ?

  • ಅನುಮತಿಸಲಾದ ಸಂಖ್ಯೆಗಳನ್ನು ಮೀರಿ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಮೆ ಅಡಿಯಲ್ಲಿ ಒಳಗೊಳ್ಳುವುದಿಲ್ಲ. (ಆಟೋದಲ್ಲಿ ಪ್ರಯಾಣಿಸಲು 3 ಮಂದಿಗಷ್ಟೆ ಅವಕಾಶ)
  • ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚಿನ ಪ್ರಯಾಣಿಕರು ಇದ್ದರೂ ವಿಮೆ ಸಿಗುವುದಿಲ್ಲ.
  • ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡುವುದು ವಿಮೆ ವ್ಯಾಪ್ತಿಗೆ ಒಳಪಡುವುದಿಲ್ಲ.
  • ವಾಹನವನ್ನು ತಪ್ಪು ಭಾಗದಲ್ಲಿ (Wrong side) ಚಾಲನೆ ಮಾಡುವುದರಿಂದ ಯಾವುದೇ ಅಪಘಾತ ಸಂಭವಿಸಿದಲ್ಲಿ, ರಾಂಗ್ ಸೈಡ್‌ನಲ್ಲಿ ಚಾಲನೆ ಮಾಡುವವರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ ಮತ್ತು ಮತ್ತು ಬಲಭಾಗದಲ್ಲಿ (ಸರಿಯಾದ) ವಾಹನವನ್ನು ಚಲಾಯಿಸಿದ ಮತ್ತು ಅಪಘಾತಕ್ಕೆ ಒಳಗಾದವರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ.
  • ಕುಡಿದು ವಾಹನ ಚಲಾಯಿಸುವವರಿಗೆ ವಿಮೆ ವ್ಯಾಪ್ತಿಗೆ ಒಳಪಡುವುದಿಲ್ಲ ಮತ್ತು ಯಾವುದೇ ನಷ್ಟಕ್ಕೆ ಪರಿಹಾರವಿಲ್ಲ.
  • ತಪ್ಪು ಬದಿಯಲ್ಲಿ (Wrong side) ಚಾಲನೆ ಮಾಡುವುದರಿಂದ ಅಪಘಾತ ಸಂಭವಿಸಿದಲ್ಲಿ, ಅವನಿಂದ ಲಕ್ಷಗಳ ಲೆಕ್ಕದಲ್ಲಿ ಹಣ ವಸೂಲಿ ಮಾಡಲಾಗುತ್ತದೆ ಅಥವಾ ಗಾಯಾಳುಗಳಿಗೆ ಅವನ ಆಸ್ತಿಗಳ ಮೂಲಕ ವಸೂಲಿ ಮಾಡಿಕೊಡಬಹುದಾಗಿದೆ. ಒಂದು ವೇಳೆ ಹಣ ಪಾವತಿ ಮಾಡಲು ಸಾಧ್ಯವಾಗದಿದ್ದರೆ 14 ವರ್ಷಗಳವರೆಗೆ ಜೈಲು ಶಿಕ್ಷೆ ನೀಡಬಹುದಾಗಿರುತ್ತದೆ
  • ಮೊಬೈಲ್ ನಲ್ಲಿ ಮಾತನಾಡುತ್ತಾ ಅಪಘಾತ ಮಾಡುವವರಿಗೂ ಕೂಡ ಮೇಲಿನ ಶಿಕ್ಷೆ ಅನ್ವಯವಾಗುತ್ತದೆ.
  • ಮೇಲಿನ ಪ್ರಕರಣಗಳ ಅಡಿಯಲ್ಲಿ ದೂರು ದಾಖಲಾದರೆ ಅಂತವರ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.
  • ಮೇಲಿನ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದ ಜವಾಬ್ದಾರಿಯುತ ಅಧಿಕಾರಿಗಳನ್ನು ಮೂರು ವರ್ಷಗಳ ಅವಧಿಗೆ ಸೇವೆಯಿಂದ ಅಮಾನತುಗೊಳಿಸಲು ಅವಕಾಶವಿರುತ್ತದೆ.
  • ಮೇಲಿನ ನಿಯಮಗಳು ವೇಗ ಮಿತಿಗಳನ್ನು ಮೀರಿದ ವೇಗದ ವಾಹನಗಳಿಗೂ ಹಾಗೂ ಅಪ್ರಾಪ್ತರು ವಾಹನ ಚಲಾಯಿಸಿದರೂ ಕೂಡ ಅನ್ವಯಿಸುತ್ತವೆ.
  • ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವವರಿಗೆ ವಿಮೆ ಪರಿಹಾರ ಅನ್ವಯಿಸುವುದಿಲ್ಲ.

ಇನ್ನಾದ್ರೂ ವಾಹನ ಸವಾರರೇ ಎಚ್ಚರ. ಅಪ್ಪಿತಪ್ಪಿಯೂ ರೂಲ್ಸ್ ಬ್ರೇಕ್ ಮಾಡ್ಬೇಡಿ. ಮಾಡಿದ್ರೆ ನೀವೂ ಇಲ್ಲ, ನಿಮ್ಮ ಮನೆಯವರಿಗೆ ವಿಮೆ ಹಣವೂ ಇಲ್ಲ ಎಂಬುದನ್ನು ಮರೆಯಬೇಡಿ.

Related Articles

Leave a Reply

Your email address will not be published. Required fields are marked *

Back to top button