ನೆಹರೂ ಕಣ್ಣಲ್ಲಿ ನೀರು ತರಿಸಿದ ಲತಾ ಹಾಡು..

ಬೆಂಗಳೂರು: ಸಂಗೀತ ಲೋಕದ ದಂತಕತೆ, ಭಾರತರತ್ನ ಲತಾ ಮಂಗೇಶ್ಕರ್ ಅವರಿಗೆ ತಮ್ಮ ಸುಮಧುರ ಕಂಠದಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುವ ಶಕ್ತಿ ಅವರ ದನಿಯಲ್ಲಿತ್ತು. ಅವರ ದನಿಗೆ ಮರುಳಾಗದವರು ಇಲ್ಲವೇ ಇಲ್ಲ ಎನ್ನಬಹುದು. 1963ರಲ್ಲಿ ಬಾಲಿವುಡ್ ನ ಎಲ್ಲಾ ಪ್ರಸಿದ್ದ ಗಾಯಕರ ಜತೆ ಅವರು ಹಾಡಿದ್ದ ಗೀತೆ ಆಲಿಸಿದ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಕಣ್ಣೀರು ಹಾಕಿದ್ದರು.
1963ರ ಜ.27ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾಜಿ ಪ್ರಧಾನಿ ಪಂಡಿತ್ ನೆಹರೂ ಅವರ ಎದುರು ಲಾತಾ ಅವರ ಕಂಠದಲ್ಲಿ ಹೊರಹೊಮ್ಮಿದ ಏ ಮೇರೆ ವತನ್ ಕೆ ಲೋಗೋ ಹಾಡು ನೆಹರೂ ಸೇರಿದಂತೆ ಎಲ್ಲರನ್ನು ಭಾವುಕರನ್ನಾಗಿಸಿ ಬಿಟ್ಟಿತು.
ಕಾರ್ಯಕ್ರಮ ಮುಗಿದ ಬಳಿಕ ಲತಾ ಮಂಗೇಶ್ಕರ್ ಅವರನ್ನು ಕರೆಸಿ ಮಾತನಾಡಿದ್ದ ಜವಾಹರಲಾಲ್ ನೆಹರೂ ‘ನೀನು ನನ್ನನ್ನು ಅಳಿಸಿಬಿಟ್ಟೆ’ ಎಂದು ಭಾವುಕರಾಗಿ ಹೇಳಿದ್ದರಂತೆ. ಈಗಲೂ ಏ ಮೇರೆ ವತನ್ ಕೇ ಲೋಗೋ ಬಹಳ ಪ್ರಸಿದ್ಧವಾದ ದೇಶಭಕ್ತಿ ಗೀತೆಯಾಗಿದೆ.
1962ರ ಭಾರತ-ಚೀನಾ ಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಗೌರವಾರ್ಥ ಲತಾ ಅವರು ಈ ಹಾಡನ್ನು ಹಾಡಿದ್ದರು.
