Breaking NewsLatestಮನರಂಜನೆಸಿನಿಮಾಸ್ಯಾಂಡಲ್ ವುಡ್

ನನ್ನಮ್ಮ ಸೂಪರ್ ಸ್ಟಾರ್ ಟ್ರೋಫಿ ಹಿಡಿದ ವಂಶಿಕಾ-ಯಶಸ್ವಿನಿ; ರನ್ನರ್ ಅಪ್ ಯಾರು ಗೊತ್ತಾ?

ಜನಪ್ರಿಯ ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಈ ಶೋ ಪ್ರಾರಂಭದಿಂದಲೇ ಸಾಕಷ್ಟು ಜನಮನ್ನಣೆ ಪಡೆದಿತ್ತು. ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾದ ‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮದಲ್ಲಿ ಮಕ್ಕಳು ಸಿಕ್ಕಾಪಟ್ಟೆ ಗುರುತಿಸಿಕೊಂಡಿದ್ದರು. ಅದರಲ್ಲೂ ಎಲ್ಲರ ಮನೆ ಮಾತಾಗಿದ್ದ ಮಾಸ್ಟರ್ ಆನಂದ್ ಮಗಳು ವಂಶಿಕಾ ಅಂಜನಿ ಕಶ್ಯಪ್ ಸಖತ್ ಮೋಡಿ ಮಾಡಿದ್ದಳು.

ಈ ಕಾರ್ಯಕ್ರಮದ ಫಿನಾಲೆ ಆಗಿದೆ. ಝಗಮಗಿಸುವ ಅದ್ದೂರಿ ವೇದಿಕೆಯಲ್ಲಿ ಕೊನೆಯ ಎಪಿಸೋಡ್​ ಮೂಡಿಬಂದಿದೆ. ಈ ಶೋನಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬ ಕುತೂಹಲ ಮೂಡಿತ್ತು. ಎಲ್ಲ ಮಕ್ಕಳು ಕೂಡ ಸೂಪರ್​ ಪರ್ಫಾರ್ಮೆನ್ಸ್​ ನೀಡಿದ್ದರು. ವಂಶಿಕಾ ವಿನ್​ ಆಗಬಹುದು ಎಂದು ಬಹುತೇಕರು ಊಹಿಸಿದ್ದರು. ಅಂತಿಮವಾಗಿ ಅದಕ್ಕೆ ಉತ್ತರ ಸಿಕ್ಕಿದೆ. ಭಾನುವಾರ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ನನ್ನಮ್ಮ ಸೂಪರ್​ ಸ್ಟಾರ್​ ಕಾರ್ಯಕ್ರಮದ ವಿನ್ನರ್​ ಹೆಸರನ್ನು ಘೋಷಿಸಲಾಗಿದೆ. ತಾಯಿ-ಮಗಳಾದ ಯಶಸ್ವಿನಿ ಹಾಗೂ ವಂಶಿಕಾ ಜೋಡಿ ಈ ಟ್ರೋಫಿ ಗೆದ್ದಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಕಿರುತೆರೆ ಪ್ರೇಕ್ಷಕರಿಗೆ ನನ್ನಮ್ಮ ಸೂಪರ್​ ಸೂಪರ್​ ಸ್ಟಾರ್​ ಕಾರ್ಯಕ್ರಮದ ಸ್ಪರ್ಧಿಗಳು ಹಲವು ತಿಂಗಳ ಕಾಲ ಮನರಂಜನೆ ನೀಡಿದರು. ವಿದ್ಯಾ-ರೋಹಿತ್​, ಸುಪ್ರಿತಾ-ಇಬ್ಬನಿ, ಜಾನ್ವಿ-ಗ್ರಂಥ್​, ಪುನೀತಾ-ಆರ್ಯ, ಯಶಸ್ವಿನಿ-ವಂಶಿಕಾ, ನಂದಿನಿ-ಅದ್ವಿಕ್​ ಅವರು ಫಿನಾಲೆ ತಲುಪಿದ್ದರು. ಭಾನುವಾರ ಸಂಜೆ ನಡೆದ ಫಿನಾಲೆಯಲ್ಲಿ ವಿನ್ನರ್​ ಯಾರು ಎಂಬುದನ್ನು ನಟಿ ತಾರಾ ಅನುರಾಧ ಅವರು ಘೋಷಿಸಿದರು. ವಂಶಿಕಾ ಮತ್ತು ಯಶಸ್ವಿನಿ ಅವರು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಈ ತಾಯಿ-ಮಗಳ ಜೋಡಿಗೆ ಟ್ರೋಫಿ ಜೊತೆ 5 ಲಕ್ಷ ರೂಪಾಯಿ ಬಹುಮಾನದ ಹಣ ಸಿಕ್ಕಿದೆ.

ಪುನೀತಾ ಹಾಗೂ ಆರ್ಯ ಅವರಿಗೆ ರನ್ನರ್​ ಅಪ್​ ಸ್ಥಾನ ಸಿಕ್ಕಿದೆ. ಈ ಶೋಗೆ ಸೃಜನ್​ ಲೋಕೇಶ್​, ಅನು ಪ್ರಭಾಕರ್​, ತಾರಾ ಅನುರಾಧ ಅವರು ನಿರ್ಣಾಯಕರಾಗಿದ್ದರು. ನಟಿ ಅನುಪಮಾ ಗೌಡ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬಂತು.

Spread the love

Related Articles

Leave a Reply

Your email address will not be published. Required fields are marked *

Back to top button