Breaking NewsLatestಸುದ್ದಿ
ಕನ್ನಡತಿ ಅನುಷಾ ಶೆಟ್ಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ: ನಟ ನಾಗ ಶೌರ್ಯ

ತೆಲುಗಿನ ಖ್ಯಾತ ನಟ ನಾಗ ಶೌರ್ಯ ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಕನ್ನಡತಿ ಅನುಷಾ ಶೆಟ್ಟಿ ಅವರನ್ನು ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ತೆಲುಗಿನ ಖ್ಯಾತ ನಟ ನಾಗ ಶೌರ್ಯ ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಕನ್ನಡತಿ ಅನುಷಾ ಶೆಟ್ಟಿ ಅವರನ್ನು ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು.
ಇಂದು ನವೆಂಬರ್ 20 ರಂದು ಬೆಂಗಳೂರಿನ ಪಂಚತಾರಾ ಹೋಟೆಲ್ನಲ್ಲಿ ನಡೆದ ವಿವಾಹದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕುಂದಾಪುರ ಮೂಲದವರಾದ ಅನುಷಾ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಸಂಸ್ಥೆಯನ್ನ ಕೂಡ ತೆರೆದಿದ್ದಾರೆ.
