Breaking NewsLatestರಾಜ್ಯಸುದ್ದಿ
ಜೋರು ಮಳೆಗೆ 150 ಕ್ಕೂ ಹೆಚ್ಚು ಗಿಳಿಮರಿಗಳ ಸಾವು!

ಒಂದು ಮರ ಎಷ್ಟು ಮುಖ್ಯ ಅಂತ ಇದರಲ್ಲೆ ಅರ್ಥ ಮಾಡಿಕೊಳ್ಳಬಹುದು.
ಶ್ರೀರಂಗಪಟ್ಟಣದಲ್ಲಿ ನೆನ್ನೆ ರಾತ್ರಿ (ಶುಕ್ರವಾರ) ಜೋರು ಗಾಳಿ, ಅಲಿಕಲ್ಲು ಮಳೆಗೆ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿದ್ದ ಮರ ಬಿದ್ದು ಸುಮಾರು 150 ಕ್ಕೂ ಹೆಚ್ಚು ಗಿಳಿಮರಿಗಳು ಸಾವಿಗೀಡಾಗಿವೆ. ಪ್ರದೀಪ್ (ಗಿಡ್ಡು) ರವರು ಗಿಳಿಗಳಿಗೆ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
