Breaking NewsLatestರಾಷ್ಟ್ರೀಯಸುದ್ದಿ
ಉಕ್ರೇನ್ ನಿಂದ ತಾಯ್ನಾಡಿಗೆ ಮರಳಲಿದ್ದಾರೆ ಮತ್ತಷ್ಟು ವಿದ್ಯಾರ್ಥಿಗಳು

ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ದದ ಪರಿಣಾಮವಾಗಿ ಭಾರತ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ.ಅವರು ಅಲ್ಲಿಂದ ತಪ್ಪಿಸಿಕೊಂಡು ಬರುವುದಕ್ಕಾಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ.
ಇನ್ನು ಕೆಲವರು ಅಲ್ಲಿ ಸಿಲುಕಿಕೊಂಡು ಸಾವು- ನೋವು ಅನುಭವಿಸುತ್ತಿದ್ದಾರೆ.ಸದ್ಯ ಯುಕ್ರೇನ್ ನಿಂದ ಮಧ್ಯಾಹ್ನ 3 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತಷ್ಟ ವಿದ್ಯಾರ್ಥಿಗಳ ತಂಡ ಬಂದಿಳಿಯಲಿದೆ. ಉಕ್ರೇನ್ ಮಿಲಿಟರಿ ಸಹಾಯದಿಂದ ಭಾರತಕ್ಕೆ ಮರಳಲಿದ್ದಾರೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರು ಸುರಕ್ಷಿತವಾಗಿ ಬರಲು ಪ್ರಾರ್ಥಿಸಲಾಗಿದೆ.
