Breaking NewsLatestರಾಷ್ಟ್ರೀಯ
ಜುಲೈ 19 ರಿಂದ ಮುಂಗಾರು ಸಂಸತ್ ಅಧಿವೇಶನ ಆರಂಭ ಸಾಧ್ಯತೆ

ನವದೆಹಲಿ : ಜುಲೈ 19 ರಿಂದ ಆಗಸ್ಟ್ 13ರ ವರೆಗೆ ಮುಂಗಾರು ಸಂಸತ್ ಅಧಿವೇಶನ ನಡೆಸುವ ಬಗ್ಗೆ ಸಂಸದೀಯ ವ್ಯವಹಾರಗಳ ಸಮಿತಿಯಿಂದ ಶಿಫಾರಸು ನೀಡಲಾಗಿದೆ. ಬಹುತೇಕ ಒಂದು ತಿಂಗಳ ಅವಧಿಯಲ್ಲಿ 20 ದಿನಗಳ ಕಾಲ ಸಂಸತ್ ಅಧಿವೇಶನ ನಡೆಸುವಂತೆ ಸಮಿತಿ ಸಲಹೆ ನೀಡಿದೆ
ಈ ಕುರಿತು ಸಂಸದೀಯ ವ್ಯವಹಾರ ಕ್ಯಾಬಿನೆಟ್ ಕಳೆದ ವಾರ ಈ ಕುರಿತು ಸಭೆ ನಡೆಸಿದ್ದು, ಈ ಸಂಬಂಧ ಪ್ರಧಾನಿ ಮೋದಿ ಅವರಿಂದ ಅಂತಿಮ ಅನುಮೋದನೆಗೆ ನಿರೀಕ್ಷೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಅನೇಕ ಸಂಸದರು ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದು, ಸಚಿವಾಲಯದ ಸಿಬ್ಬಂದಿಗಳು ಕೂಡ ಬಹುತೇಕರು ಲಸಿಕೆ ಪಡೆದಿದ್ದಾರೆ. ಈ ಹಿನ್ನಲೆ ಸಂಸತ್ತಿನಲ್ಲಿ ಕೋವಿಡ್ ಸೋಂಕು ಹರಡುವ ಭೀತಿ ಈ ಬಾರಿ ಇಲ್ಲ. ಈ ಬಾರಿ ಸಂಸತ್ತಿಗೆ ಆಗಮಿಸುವವರಿಗೆ ಲಸಿಕೆ ಪ್ರಮಾಣ ಪತ್ರದೊಂದಿಗೆ ಹಾಜರಾಗುವ ಕುರಿತು ನಿಯಮ ರೂಪಿಸುವ ಸಾಧ್ಯತೆ ಇದೆ.
