ಕಾಂಗ್ರೆಸ್ ಮುಖಂಡರು ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ: ಎನ್.ರವಿಕುಮಾರ್

ಕಲಬುರಗಿ: ಕಾಂಗ್ರೆಸ್ ನವರು ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮಾನಸಿಕ ಸ್ಥೀಮಿತ ಕಳೆದುಕೊಂಡು ಮಾತಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ಗೆ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ತೀರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೋಕರ್ ಎನ್ನುವ ಮಾಜಿ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿಕೆಗೆ ಖಂಡಿಸಿದರು. ಇಂತಹ ಮಾತುಗಳು ಬರುವುದು ಅಸ್ತಿತ್ವ ಕಳೆದುಕೊಂಡಾಗ, ಇದೇ ರೀತಿ ಮಾತಾಡುತ್ತಾ ಇದ್ರೆ ಇರುವ ಕಾಂಗ್ರೆಸ್ ಬೇರುಗಳು ಕಳೆದುಕೊಳ್ಳುತ್ತಾರೆ ಎಂದು ತೀರುಗೇಟು ನೀಡಿದ ರವಿಕುಮಾರ, ಕಾಂಗ್ರೆಸ್ ಗೆ ಜೆಡಿಎಸ್ ಸಪೋರ್ಟ್ ಮಾಡಲ್ಲ. ಬಿಜೆಪಿ ಮೇಯರ್ ಗದ್ದುಗೆ ಹಿಡಿದ ಮೇಲೆ ಕಾಂಗ್ರೆಸ್ ನವರು ಮತ್ತಷ್ಟು ಸ್ಥಿಮಿತ ಕಳೆದಿಕೊಳ್ಳುತ್ತಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿ ಕಲಿಯಲಿ:
ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಅವರು ಲೂಸ್ ಟಾಕ್ ಮಾತಾಡುತ್ತಿದ್ದಾರೆ. ಇವರ ಈ ರೀತಿಯ ಹೇಳಿಕೆಗಳಿಂದ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ನಳಿನ್ ಕುಮಾರ್ ಕಟೀಲ್, ಪ್ರಧಾನಿ ಮೋದಿ ಅವರ ಬಗ್ಗೆ ಈ ರೀತಿ ಮಾತಾಡಿದ್ರೆ ಜನ ಪಾಠ ಕಲಿಸುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿ ಶರಣಪ್ರಕಾಶ ಪಾಟೀಲ್ ಅವರು ಕಲಿಯಬೇಕು. ಇವರು ಮಾತಾಡಿದ್ದು ನೋಡಿದ್ರೆ ಅಸಹ್ಯ ಏನಿಸುತ್ತಿದೆ. ಕಲಬುರಗಿಯಲ್ಲಿ ಕಾಂಗ್ರೆಸ್ ಕಳಚಿ ಬಿಳೋದಕ್ಕೆ ಕಾರಣ ಪ್ರೀಯಾಂಕ್ ಖರ್ಗೆ ಮತ್ತು ಶರಣಪ್ರಕಾಶ ಪಾಟೀಲ್, ಮೋದಿ ಬಗ್ಗೆ ಪ್ರೀಯಾಂಕ ಖರ್ಗೆ ಮಾತಾಡ್ತಿದ್ದಾರೆ. ಮೋದಿ ಅವರ ಮುಂದೆ, ಗುಣದಲ್ಲಿ ಪ್ರಿಯಾಂಕ್ ಖರ್ಗೆ ಗುಲಗಂಜಿಯೂ ಅಲ್ಲ ಎಂದು ಕಿಡಿಕಾರಿದರು.
ಆಪರೇಷನ್ ಕಮಲದ ಸುಳಿವು ಕೊಟ್ಟ್ರಾ ರವಿಕುಮಾರ್..?
ನಾವು 23 ಸ್ಥಾನಗಳನ್ನು ಗೆದ್ದಿದ್ದೇವೆ ಮೇಯರ್ ಸ್ಥಾನ ಬಿಟ್ಟುಕೊಡೊದು ಕಷ್ಟ. ಉಳಿದ ಸ್ಥಾನಗಳ ಬಗ್ಗೆ ಮಾತಕತೆ ಮಾಡುತ್ತೇವೆ. ರಾಜಕಾರಣದಲ್ಲಿ ಎಲ್ಲಾ ಸಾಧ್ಯತೆಗಳು ಇವೆ. ಕಲಬುರಗಿಯಲ್ಲಿ ಬಿಜೆಪಿಯ ಮೇಯರ್ ಆಗ್ತಾರೆ. ಎನ್ನುವ ಮೂಲಕ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಪರೇಷನ್ ಕಮಲದ ಸುಳಿಕೊಟ್ಟಿದ್ದಾರೆ.
