Breaking NewsLatestರಾಜಕೀಯರಾಜ್ಯ
ಬಿಎಸ್ವೈ ಹೇಳಿದ್ದನ್ನೆಲ್ಲ ಸಿಎಂ ಬೊಮ್ಮಾಯಿ ಕೇಳಲಾರರು: ಶಾಸಕ ಯತ್ನಾಳ್

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಯಾಡೋ ಆಗಿ ಕೆಲಸ ಮಾಡಲ್ಲ. ಬಿ.ಎಸ್.ಯಡಿಯೂರಪ್ಪ ಕುಟುಂಬದಿಂದ ದೂರ ಉಳಿದು ಕೆಲಸ ಮಾಡುತ್ತಾರೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು.
ರಾಜಭವನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬದಲಾವಣೆ ಆಗುತ್ತೆ ನೋಡುತ್ತೀರಿ. ಬಿಜೆಪಿ ಶಾಸಕರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಾರೆ. ಹೈಕಮಾಂಡ್ ಆದೇಶ ಮಾಡಿದರೆ ನಾನು ಸಚಿವನಾಗುತ್ತೇನೆ ಎಂದರು.
ಇನ್ನು ಯಡಿಯೂರಪ್ಪ ನಿರ್ಗಮನದ ಬಳಿಕ ಕೆಟ್ಟದಾಗಿ ಮಾತನಾಡಬಾರದು. ಕೆಟ್ಟದಾಗಿ ಮಾತನಾಡುವುದು ಬುದ್ಧಿವಂತರ ಲಕ್ಷಣವಲ್ಲ. ಯಡಿಯೂರಪ್ಪ ಅವರ ಜೀವನ ನೆಮ್ಮದಿ, ಸುಖಕರವಾಗಿರಲಿ ಎಂದು ತಿಳಿಸಿದರು.
