ಬಿಜೆಪಿ ಸೇರ್ಪಡೆಯಾದ ಶಾಸಕ ಎನ್ ಮಹೇಶ್

ಬೆಂಗಳೂರು: ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಮಹೇಶ್ ಗುರುವಾರ ಬಿಜೆಪಿ ಸೇರ್ಪಡೆಯಾದರು.
ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು. ಮಲ್ಲೇಶ್ವರಂನ ಬಿಜೆಪಿ ಕಛೇರಿ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್ ಮಹೇಶ್ ಅವರನ್ನು ಸಿಎಂ ಬೊಮ್ಮಾಯಿ ಪಕ್ಷಕ್ಕೆ ಸ್ವಾಗತಿಸಿದರು.
ಈ ವೆಳೆ ಮಾತನಾಡಿದ ಬೊಮ್ಮಾಯಿ, ದಲಿತ ಸಮುದಾಯವನ್ನು ಶಾಸಕರಾಗುವುದಕ್ಕೂ ಮೊದಲೇ ದೊಡ್ಡ ಮಟ್ಟದಲ್ಲಿ ಗೆದ್ದಿರುವವರು ಮಹೇಶ್. ಅವರ ಸಂಘಟನಾ ಸಾಮರ್ಥ್ಯ ಬಿಜೆಪಿಗೆ ಬಲವಾಗಿ ಒದಗಲಿದೆ ಎಂದರು.
ಕಳೆದೆರಡು ವರ್ಷಗಳಲ್ಲಿ ಅವರಲ್ಲಿ ಬಿಜೆಪಿಯ ಬಗ್ಗೆ ವಿಶ್ವಾಸ ಬೆಳೆದಿದೆ. ಅಂತಿಮವಾಗಿ ಬಿಜೆಪಿಯನ್ನು ಸೇರಿದ್ದಾರೆ ಎಂದ ಬೊಮ್ಮಾಯಿ, ಯಡಿಯೂರಪ್ಪ ಸರ್ಕಾರ ರಚನೆ ವೇಳೆ ತಾವಾಗಿಯೇ ಬಂದು ಮಹೇಶ್ ಬೆಂಲಿಸಿದ್ದನ್ನು ನೆನೆದರು.
ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿಎಸ್ಪಿಯಿಂದ ಗೆದ್ದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಮಹೇಶ್, ಸರ್ಕಾರ ಪತನದ ಬಳಿಕ ಬಿಜೆಪಿಯತ್ತ ವಾಲಿದ್ದರು. ಬಳಿಕ ಅವರನ್ನು ಬಿಎಸ್ಪಿಯಿಂದ ಉಚ್ಚಾಟಿಸಲಾಗಿತ್ತು.
