Breaking NewsLatestರಾಷ್ಟ್ರೀಯಸುದ್ದಿ
ಚೀನಿ ಸೇನೆಯಿಂದ ಅರುಣಾಚಲ ಪ್ರದೇಶದ ಯುವಕನ ಹಸ್ತಾಂತರ

ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಕಾಣೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಚೀನಾ, ಭಾರತೀಯ ಸೇನೆಗೆ ಹಸ್ತಾಂತರ ಮಾಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. ಅರುಣಾಚಲ ಪ್ರದೇಶದ ಯುವಕ ತರೋನ್ ನನ್ನು ಚೀನಾ ಭಾರತಕ್ಕೆ ಹಸ್ತಾಂತರ ಮಾಡಿದ್ದು, ವೈದ್ಯಕೀಯ ಇತರೆ ಕಾನೂನು ಕ್ರಮ ಅನುಸರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ಜನವರಿ 25ರಂದು ಅರುಣಾಚಲ ಪ್ರದೇಶದ ಯುವಕ ತರೋನ್ ನನ್ನು ಪೀಪಲ್ ಚೀನಾ ಆರ್ಮಿ ವಶಕ್ಕೆ ಪಡೆದುಕೊಂಡಿತ್ತು ಎಂದು ಹಿಂದೆ ವರದಿಯಾಗಿತ್ತು
