Breaking NewsLatestಉತ್ತರ ಕನ್ನಡಜಿಲ್ಲಾ ಸುದ್ದಿರಾಜಕೀಯ

ಬೇಳೂರ್​​​ಗೆ ಸರ್ಕಾರ ಪತನದ ಬಗ್ಗೆ ಕನಸು ಬಿದ್ದಿರಬೇಕು: ಸಚಿವ ಹೆಬ್ಬಾರ್ ವ್ಯಂಗ್ಯ

ಕಾರವಾರ : ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸರ್ಕಾರ ಬೀಳುವ ಕುರಿತು ಕನಸು ಬಿದ್ದಿರಬೇಕು.ಆದರೆ ಯಾವುದೇ ಕಾರಣಕ್ಕೂ ಸರ್ಕಾರ ಒಂದು ದಿನ ಮುಂಚಿತವಾಗಿಯೂ ಪತನವಾಗಲ್ಲ. ಸರಕಾರ ಅವಧಿ ಪೂರೈಸಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ,ಗೋಪಾಲಕೃಷ್ಣ ಅವರಿಗೆ ಅಧಿಕಾರ ಕಳೆದುಕೊಂಡು ಶೀಘ್ರದಲ್ಲಿ ಚುನಾವಣೆಗೆ ಹೋಗಬೇಕಾಗಿದೆ. ಆದ ಕಾರಣ ಹೇಳಿಕೆ ನೀಡುತ್ತಿದ್ದಾರೆ ಎಂದು ಬೇಳೂರು ಅವರ ಸರ್ಕಾರ ಪತನದ ಹೇಳಿಕೆಗೆ ತಿರುಗೇಟು ನೀಡಿದರು.

119 ಶಾಸಕರನ್ನು ಹೊಂದಿರುವ ಸರ್ಕಾರ ಇದಾಗಿದೆ. ಇದು ಗ್ರಾಮ ಪಂಚಾಯತಿಯಲ್ಲ. ಯಾರಾದರೂ ಸರ್ಕಾರ ಬೀಳುವ ಭ್ರಮೆಯಲ್ಲಿದ್ದರೆ ಅದು ಭ್ರಮೆ ಮಾತ್ರ. ಆ ಭ್ರಮೆಯಲ್ಲಿಯೇ ಇನ್ನೂ ಒಂದು ವರ್ಷ ದಿನ ದೂಡಬೇಕಾಗುತ್ತದೆ ಎಂದು ಟೀಕಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button