Breaking NewsLatestಜಿಲ್ಲಾ ಸುದ್ದಿರಾಷ್ಟ್ರೀಯಸುದ್ದಿಹಾಸನ

ಒಬ್ಬನಿಗೆ ಹೊಡೆದ್ರೆ ಸಾವಿರ ಜನರಿಗೆ ಮೆಸೇಜ್​​ ಹೋಗಬೇಕು – ಸಿ.ಟಿ ರವಿ

ಹಾಸನ: ಶಿವಮೊಗ್ಗದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಕಿಡಿಕಾರಿದಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು, ಅವರಿಗೆ ಪ್ರೀತಿಯಿಂದ ಹೇಳಿದ್ರೇ ಅರ್ಥವಾಗುವುದಿಲ್ಲ. ಒಬ್ಬನಿಗೆ ಬಡಿದ್ರೇ. ಸಾವಿರ ಜನರಿಗೆ ಮೆಸೇಜ್ ಹೋಗಬೇಕು ಆ ರೀತಿ ಮಾಡಬೇಕು ಎಂಬುದಾಗಿ ಹೇಳಿದ್ದಾರೆ.

ನಗರದಲ್ಲಿ ಇಂದು ಹಾಸನಾಂಬೆ ದೇವರ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಬಿಜೆಪಿ 150 ಸೀಟಿ ಗೆಲ್ಲುತ್ತದೆ ಎಂಬುದು ಸುಳ್ಳು. ಇಡೀ ದೇಶದಲ್ಲಿ ಎಲ್ಲಾ ಎಂ ಎಲ್ ಎ ಸೇರಿದ್ರೇ ಅಷ್ಟು ಆಗಬಹುದು. ಕರ್ನಾಟಕದಲ್ಲಿ ಅಷ್ಟು ಸೀಟು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದರು.

ಶಿವಮೊಗ್ಗದಲ್ಲಿ ಶಾಂತಿ ಕದಡುವ ಪ್ರಯತ್ನದ ಬಗ್ಗೆ ಮಾತನಾಡಿದಂತ ಅವರು, ನೋಡಿ ಮತ್ತೆ ಮತ್ತೆ ಶಾಂತಿಯನ್ನು ಕದಡುವಂತ ಪ್ರಯತ್ನ ಮಾಡುವವರಿಗೆ ನಾವು ಪ್ರೀತಿಯಿಂದ ಹೇಳಿದರೇ ಬಗ್ಗುವುದಿಲ್ಲ. ಅವರನ್ನು ಬಗ್ಗಿಸಬೇಕಾದ ರೀತಿ ಬೇರೆಯೇ ಇದೆ. ಆ ರೀತಿಯಿಂದಲೇ ಬಗ್ಗಿಸಬೇಕು. ಒಬ್ಬನಿಗೆ ಬಡಿದರೇ, ಸಾವಿರ ಜನರಿಗೆ ಮೆಸೇಜ್ ಹೋಗಬೇಕು. ಆ ತರಾನೇ ಮಾಡಬೇಕು ಎಂದು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button