Breaking NewsLatestರಾಜ್ಯ

ಮೇಕೆದಾಟು ಯೋಜನೆ; ಶುಕ್ರವಾರ ಮೋದಿ ಜೊತೆ ಬಿಎಸ್​ವೈ ಚರ್ಚೆ ಸಾಧ್ಯತೆ

ಬೆಂಗಳೂರು: ರಾಜ್ಯದ ಮೇಕೆದಾಟು ಯೋಜನೆ ವಿಚಾರವಾಗಿ ಪ್ರಬಲ ವಿರೋಧಕ್ಕೆ ತಮಿಳುನಾಡು ಸಜ್ಜಾಗಿರುವ ಬೆನ್ನಲ್ಲೇ ಶುಕ್ರವಾರ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರಧಾನಿ ಮೋದಿಯವರೊಡನೆ ಈ ವಿಚಾರವಾಗಿ ಚರ್ಚಿಸುವ ಸಾಧ್ಯತೆಯಿದೆ.

ಶುಕ್ರವಾರ ಬಿಎಸ್​ವೈ ದೆಹಲಿಗೆ ತೆರಳಲಿದ್ದು, ಸಂಜೆ ಪ್ರಧಾನಿಯವರನ್ನು ಭೇಟಿ ಮಾಡಿ ಮೇಕೆದಾಟು ಪ್ರಾಜೆಕ್ಟ್ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರೊಂದಿಗೆ ಈ ಸಂಬಂಧ ಬಿಎಸ್​ವೈ ಸಭೆ ನಡೆಸಿದ್ದರು.

ಶುಕ್ರವಾರದ ಬಿಎಸ್​ವೈ ದೆಹಲಿ ಭೇಟಿಯ ಮುಖ್ಯ ಉದ್ದೇಶ ಸಂಪುಟ ವಿಸ್ತರಣೆ ಸಂಬಂಧ ಮೋದಿ ಮತ್ತು ನಡ್ಡಾ ಅವರೊಡನೆ ಚರ್ಚಿಸುವುದಾಗಿದೆ. ಈ ವೇಳೆ ಅವರು ಮೇಕೆದಾಟು ಯೋಜನೆಯ ಅಗತ್ಯವನ್ನೂ ಮೋದಿಯವರಿಗೆ ಮನವರಿಕೆ ಮಾಡಿಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button