Breaking NewsLatestರಾಷ್ಟ್ರೀಯಸುದ್ದಿ

ಸರ್ಕಾರಿ ವೈದ್ಯರ ಮುಷ್ಕರ: ವೈದ್ಯಕೀಯ ಸೇವೆ ಸಿಗದೆ ಸಾರ್ವಜನಿಕರ ಪರದಾಟ!

ಅಹಮದಾಬಾದ್: ತಾತ್ಕಾಲಿಕ ಸೇವೆಗಳನ್ನು ಕಾನೂನುಬದ್ಧಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ಗುಜರಾತ್ ನಲ್ಲಿ ಸುಮಾರು 10 ಸಾವಿರ ಸರ್ಕಾರಿ ವೈದ್ಯರು ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಇದರಿಂದ ಸಾವಿರಾರು ರೋಗಿಗಳು ನರಳಾಡುವಂತಾಗಿದೆ.

ರೋಗಿಗಳ ಚಿಕಿತ್ಸೆಗೆ ನಿರಾಕರಿಸಿ ವೈದ್ಯರು ಮುಷ್ಕರಕ್ಕೆ ಇಳಿದಿದ್ದಾರೆ. ಇದರಿಂದ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ರಾಜ್ಯ ಸರ್ಕಾರಿ ಆರೋಗ್ಯ ಇಲಾಖೆಯ ಗುಜರಾತ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ವ್ಯತ್ಯಾಸಗೊಂಡಿವೆ.

ಬೇಡಿಕೆ ಈಡೇರಿಸುವಂತೆ 10 ಸಾವಿರ ಸರ್ಕಾರಿ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು ಎಲ್ಲಾ ರೀತಿಯ ಆಸ್ಪತ್ರೆಯ ವೈದ್ಯರೂ ಇಂದಿನಿಂದ ಮುಷ್ಕರದಲ್ಲಿ ಭಾಗಿಯಾಗೋದಾಗಿ ಗುಜರಾತ್ ವೈದ್ಯಕೀಯ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ರಜನೀಶ್ ಪಾಟೀಲ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button