Breaking NewsLatestಕ್ರೈಂರಾಷ್ಟ್ರೀಯಸುದ್ದಿ

ಮಾಜಿ ಪತ್ನಿ, ಮಗಳನ್ನ ಗುಂಡಿಟ್ಟ ಕೊಂದು ತಾನು ಸತ್ತ: ವಿಡಿಯೋ ವೈರಲ್

ವೈವಾಹಿಕ ಸಂಬಂಧಗಳು ಚೆನ್ನಾಗಿದ್ದರೆ ಎಷ್ಟು ಪ್ರಿಯ ಎನಿಸುತ್ತದೆಯೋ ಅದೇ ರೀತಿ ಆ ಸಂಬಂಧಗಳು ಹಳಸಿ ಹೋದರೆ ಆಗುವ ಅಪಾಯಗಳು, ದುರಂತಗಳು ಭೀಕರವಾಗಿಯೇ ಇರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಮಾತಿಗೆ ಸಷ್ಟ ಉದಾಹರಣೆ ಎಂಬಂತೆ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿ ಹಾಗೂ ಪುತ್ರಿಯನ್ನು ನಡು ರಸ್ತೆಯಲ್ಲಿ ಕೊಲೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಘಟನೆ ಪಾಟ್ನಾದಲ್ಲಿ ನಡೆದಿದೆ. ಹಾಡ ಹಗಲೇ ನಡು ರಸ್ತೆಯಲ್ಲಿ ಈ ಭೀಕರ ಘಟನೆ ಸಂಭವಿಸಿದೆ. ಸಿಸಿ ಟಿವಿ ದೃಶ್ಯಾವಳಿಯ ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಈ ದುರ್ಘಟನೆಯಲ್ಲಿ ಮೂವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳಲ್ಲಿ ವ್ಯಕ್ತಿಯು ಬ್ಯಾಗ್​ ಹಾಗೂ ಪಿಸ್ತೂಲ್​ನ್ನು ಹಿಡಿದಿದ್ದ. ಮಾಜಿ ಪತ್ನಿಯು ಹೊರಗೆ ಬರುತ್ತಿದ್ದಂತೆಯೇ ಆತ ಮಹಿಳೆಯ ತಲೆಗೆ ಗುಂಡು ಹಾರಿಸಿ ಬಳಿಕ ತನ್ನನ್ನೂ ತಾನು ಶೂಟ್​ ಮಾಡಿಕೊಂಡಿದ್ದಾನೆ.

ಮಾಜಿ ಪತ್ನಿ ಮಗಳನ್ನ ಕೊಲ್ಲುವ ದೃಶ್ಯ

ಮೃತ ವ್ಯಕ್ತಿಯನ್ನು ರಾಜೀವ್​ ಕುಮಾರ್​ ಎಂದು ಗುರುತಿಸಲಾಗಿದೆ. ಈತನ ಮಾಜಿ ಪತ್ನಿ ಶಶಿಪ್ರಭಾ ಈತನಿಗೆ ಡಿವೋರ್ಸ್ ನೀಡಿ ಬಳಿಕ ಮತ್ತೊಂದು ವಿವಾಹವಾಗಿದ್ದರು. ರಾಜೀವ್​ ಕುಮಾರ್​ ಮೊದಲ ವಿವಾಹದಲ್ಲಿ ಜನಿಸಿದ್ದ ಮಗಳು ಸಂಸ್ಕೃತಿ ಎಂಬಾಕೆಯನ್ನೂ ಈತ ಕೊಲೆ ಮಾಡಿದ್ದಾರೆ. ಈ ಘಟನೆಯನ್ನು ಕಂಡು ರಸ್ತೆಯಲ್ಲಿ ಕುಸಿದು ಬಿದ್ದ ಮಹಿಳೆಯನ್ನು ಶಶಿಪ್ರಭಾ ಎಂದು ಗುರುತಿಸಲಾಗಿದೆ. ಮದುವೆ ಮನೆಯಿಂದ ಇವರು ತಮ್ಮ ಮನೆಗೆ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮೊದಲು ರಾಜೀವ್​ ಕುಮಾರ್ ಶಶಿ ಪ್ರಭಾಳ ಸಹೋದರಿಯನ್ನು ವಿವಾಹವಾಗಿದ್ದ. ಆಕೆ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಳು. ಇದಾದ ಬಳಿಕ ರಾಜೀವ್​ ಕುಮಾರ್​ ಶಶಿ ಪ್ರಭಾಳ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ. ಆದರೆ ವೈವಾಹಿಕ ಸಂಬಂಧದಲ್ಲಿ ಯಾವುದೇ ಸುಧಾರಣೆ ಕಂಡು ಬಾರದ ಹಿನ್ನೆಲೆಯಲ್ಲಿ ಶಶಿ ಪ್ರಭಾ ರಾಜೀವ್​ ಕುಮಾರ್​ಗೆ ವಿಚ್ಛೇದನ ನೀಡಿದ್ದಳು. ರಾಜೀವ್​ ಕುಮಾರ್​ ಮೊದಲ ಮದುವೆಯಲ್ಲಿ ಜನಿಸಿದ್ದ ಮಗಳು ಸಂಸ್ಕೃತಿ ತಾನು ತನ್ನ ಮಲತಾಯಿಯ ಜೊತೆಯಲ್ಲಿಯೇ ಇರುವುದಾಗಿ ಹೇಳಿದ್ದಳು.

ಇದಾದ ಬಳಿಕ ಶಶಿಪ್ರಭಾ ಏರ್​ ಫೋರ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹವಾಗಿದ್ದರು. ಪಾಟ್ನಾದ ಹೈ ಪ್ರೊಫೈಲ್ ಪೊಲೀಸ್​ ಕಾಲೋನಿ​ ಏರಿಯಾದ ಅಪಾರ್ಟ್​ಮೆಂಟ್​ ಒಂದರಲ್ಲಿ ಇವರು ಬಾಡಿಗೆಗೆ ವಾಸವಿದ್ದರು. ಇದು ಉನ್ನತ ನಿವೃತ್ತ ಪೊಲೀಸ್ ಅಧಿಕಾರಿಗಳ ನೆಲೆಯಾಗಿದೆ.

ರಾಜೀವ್​ ಕುಮಾರ್​ ಪದೇ ಪದೇ ಶಶಿಪ್ರಭಾ ಹಾಗೂ ಸಂಸ್ಕೃತಿಗೆ ತನ್ನೊಂದಿಗೆ ಇರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಶಶಿ ಪ್ರಭಾ ಹಾಗೂ ಸಂಸ್ಕೃತಿ ನಿರಾಕರಿಸಿದ್ದೇ ಈತನ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ . ಅಲ್ಲದೇ ಮೃತಪಟ್ಟ ರಾಜೀವ್​ ಕುಮಾರ್ ಮಾನಸಿಕ ಅಸ್ವಸ್ಥ ಕೂಡ ಆಗಿದ್ದ ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button