Breaking Newsರಾಜಕೀಯರಾಷ್ಟ್ರೀಯ
ಮೋದಿ ಪ್ರಬಲವಾಗಿರುವುದಕ್ಕೆ ಕಾಂಗ್ರೆಸ್ ಕಾರಣ: ಮಮತಾ ಬ್ಯಾನರ್ಜಿ

ಪಣಜಿ: ಪ್ರಧಾನಿ ಮೋದಿ ಹೆಚ್ಚು ಶಕ್ತಿಶಾಲಿಯಾಗುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಬಿಜೆಪಿಯ ಪ್ರಚಾರಕನಂತೆ ಕಾರ್ಯನಿರ್ಹಿಸುತ್ತಿರುವ ಮೂಲಕ ಹಾಗೂ ಚುನಾವಣೆಗೂ ಮುನ್ನ ಯಾವುದೇ ಮೈತ್ರಿ ಸಾಧ್ಯತೆಗೂ ಅವಕಾಶವಾಗದಂತೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಮೋದಿ ಪ್ರಬಲರಾಗುವುದಕ್ಕೆ ಕಾರಣವಾಗಿದೆ ಎಂದು ಮಮತಾ ಆರೋಪಿಸಿದರು.
ಗೋವಾದಲ್ಲಿ ಮಾತನಾಡುತ್ತಿದ್ದ ಅವರು, ಪ್ರತಿಪಕ್ಷಗಳೆಲ್ಲ ಒಟ್ಟಾಗುವ ಅಗತ್ಯವನ್ನು ಕೂಡ ಕಾಂಗ್ರೆಸ್ ಮನಗಾಣುತ್ತಿಲ್ಲ. ಬಿಜೆಪಿಯನ್ನು ಮಣಿಸುವ ನಿಟ್ಟಿನ ಒಂದು ಮೈತ್ರಿಗೆ ಕಾಂಗ್ರೆಸ್ ಸಿದ್ಧವೇ ಇಲ್ಲ ಎಂದು ಮಮತಾ ಖೇದ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರಣಕ್ಕೆ ಮೋದಿ ಹೆಚ್ಚು ಪ್ರಬಲರಾಗುತ್ತಿದ್ದಾರೆ. ಯಾಖೆಂದರೆ ಕಾಂಗ್ರೆಸ್ ಪಕ್ಷ ಬಿಜೆಪಿ ಪಾಲಿನ ಟಿಆರ್ಪಿಯಾಗಿದೆ. ಕಾಂಗ್ರೆಸ್ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ದೇಶ ಅದರಿಂದ ತೊಂದರೆಗೆ ಸಿಲುಕಲಿದೆ ಎಂದು ಮಮತಾ ಹೇಳಿದ್ದಾರೆ.
