Breaking NewsLatestಆಹಾರಲೈಫ್ ಸ್ಟೈಲ್

ಮಟನ್ ಮಸಾಲ ಒಮ್ಮೆ ಮಾಡಿ ರುಚಿ ನೋಡಿ

ಯುಗಾದಿ ಹಬ್ಬದಂದು ವಿಶೇಷ ಸಿಹಿ ತಿನಿಸುಗಳನ್ನ ಮಾಡುತ್ತೇವೆ. ಆದರೆ ಹಬ್ಬದ ಮರು ದಿನ ಹೊಸ ತೊಡಕಿಗೆ ನಾನ್ ವೆಜ್ ಕಾರುಬಾರು ಜೋರಾಗಿರುತ್ತದೆ. ಮಾಂಸದ ಅಡುಗೆ ಪ್ರಿಯರಿಗೆ ಮಸಾಲೆ ಹಾಗೂ ಕೊಂಚ ಖಾರವಾದ ಖಾದ್ಯಗಳೇ ಇಷ್ಟ. ಆದರೆ ಇದನ್ನು ತಯಾರಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಹೆಚ್ಚಿನ ಮನೆಗಳಲ್ಲಿ ನಾನ್ ವೆಜ್ ಅಡುಗೆ ಮಾಡಲು ಕೊಂಚ ಹಿಂದೇಟು ಹಾಕುತ್ತಾರೆ. ಆದ್ರೆ ಕೆಲವೊಂದು ನಾನ್ ವೆಜ್ ಅಡುಗೆಯನ್ನು ಸಹ ಸುಲಭವಾಗಿ ಮಾಡಬಹುದು. ಯುಗಾದಿ ಹೊಸತೊಡಕಿಗೆ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಮಟನ್ ಮಸಾಲ ಕರಿ ಮಾಡಿ ನೋಡಿ

ಬೇಕಾಗುವ ಸಾಮಾಗ್ರಿಗಳು:

ಮೇಕೆ ಮಾಂಸ- ಅರ್ಧ ಕೆ.ಜಿ

ಬೆಣ್ಣೆ- ಅರ್ಧ ಕಪ್

ಗರಂ ಮಸಾಲಾ ಪುಡಿ- ಒಂದು ಚಿಕ್ಕ ಚಮಚ

ಧನಿಯ ಪುಡಿ- ಒಂದು ಚಿಕ್ಕ ಚಮಚ

ಕೆಂಪು ಮೆಣಸಿನ ಪುಡಿ- ಒಂದು ಚಿಕ್ಕ ಚಮಚ

ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – ಒಂದು ಚಿಕ್ಕ ಚಮಚ

ಹಸಿಮೆಣಸು- 5 ರಿಂದ 6

ಹೆಚ್ಚಿದ ಈರುಳ್ಳಿ- 1 ಕಪ್

ನಿಂಬೆ ರಸ- ಒಂದು ಚಿಕ್ಕ ಚಮಚ

ಅಡುಗೆ ಎಣ್ಣೆ ಅಗತ್ಯಕ್ಕೆ ತಕ್ಕಂತೆ
…ಉಪ್ಪು- ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು: ಅಲಂಕರಿಸಲು

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಗರಂ ಮಸಾಲಾ ಪುಡಿ, ಧನಿಯಾ ಪುಡಿ, ಮೆಣಸಿನ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕುಕ್ಕರ್ ಅನ್ನು ಕೊಂಚ ಬಿಸಿ ಮಾಡಿ ಇದರಲ್ಲಿ ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ಬಳಿಕ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ತಿರುವಿ. ಬಳಿಕ ಹಸಿಮೆಣಸಿನಕಾಯಿ ಹಾಕಿ ಕೊಂಚ ಹುರಿಯಿರಿ ಈರುಳ್ಳಿ ಬೆಂದು ಎಣ್ಣೆ ಬಿಡುವ ವೇಳೆಗೆ ಕುರಿ ಮಾಂಸ ಹಾಕಿ ನಿಧಾನವಾಗಿ ತಿರುವುತ್ತಾ ಹುರಿಯಿರಿ. ಮಸಾಲೆ ಮಾಂಸಕ್ಕೆ ಅಂಟಿದೆ ಎಂದು ಖಚಿತವಾದ ಬಳಿಕ ಪಾತ್ರೆಯಲ್ಲಿ ಮಿಶ್ರಣ ಮಾಡಿದ್ದ ಮಸಾಲೆಯನ್ನು ಹಾಕಿ ತಿರುವಿ. ಮಾಂಸ ಸರಿ ಸುಮಾರು ಮುಕ್ಕಾಲು ಪಾಲು ಬೆಂದಿದೆ ಎನಿಸಿದ ಬಳಿಕ ಕೊಂಚ ಉಪ್ಪು, ನಿಂಬೆರಸ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಕುದಿಯಲು ಪ್ರಾರಂಭಿಸಿದ ಬಳಿಕ ಕುಕ್ಕರಿನ ಮುಚ್ಚಳ ಮುಚ್ಚಿ ಐದರಿಂದ 6 ವಿಶಲ್ ಬರುವವರೆಗೆ ಬೇಯಿಸಿ. ಬಳಿಕ ಉರಿ ನಂದಿಸಿ ಕುಕ್ಕರನ್ನು ಹಾಗೇ ತಣಿಯಲು ಬಿಡಿ. ಕೊಂಚ ತಣ್ಣಗಾದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಈ ಮಸಾಲಾವನ್ನು ಕೊಂಚ ಎಣ್ಣೆ ಸವರಿದ ಇನ್ನೊಂದು ಪಾತ್ರೆಗೆ ಸುರಿಯಿರಿ. ನಂತರ ಅದು ತಣ್ಣಗೆ ಆದ್ಮೇಲೆ ಅನ್ನ ಅಥವಾ ರೊಟ್ಟಿ, ಚಪಾತಿಗಳೊಂದಿಗೆ ಸವಿಯಿರಿ.

Spread the love

Related Articles

Leave a Reply

Your email address will not be published. Required fields are marked *

Back to top button