Breaking NewsLatestರಾಷ್ಟ್ರೀಯ

ಮಹಾರಾಷ್ಟ್ರ: ಮಳೆ ಅನಾಹುತಕ್ಕೆ ಬಲಿಯಾದವರ ಸಂಖ್ಯೆ ಏರಿಕೆ

ಮುಂಬೈ: ಮಹಾರಾಷ್ಟ್ರದ ಪ್ರವಾಹದಿಂದ ಹಾನಿಗೀಡಾದ ಸ್ಥಳಗಳಲ್ಲಿ ಅವಶೇಷಗಳಡಿ ಇರುವ ಶವಗಳು ಪತ್ತೆಯಾಗುತ್ತಲೇ ಇವೆ. ನಿನ್ನೆ ರಾಯಗಡದಲ್ಲಿ 11 ಹಾಗೂ ವಾರ್ಧಾ ಮತ್ತು ಅಕೋಲಾಗಳಲ್ಲಿ ತಲಾ 2 ಶವಗಳು ಪತ್ತೆಯಾಗಿವೆ.

ಪ್ರವಾಹ, ಭೂಕುಸಿತ ಇತ್ಯಾದಿ ಪ್ರಾಕೃತಿಕ ವಿಕೋಪದ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ ಈಗಾಗಲೇ 170ಕ್ಕೂ ಅಧಿಕವಾಗಿದ್ದು, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.

ಪ್ರವಾಹಪೀಡಿತ ಪ್ರದೇಶಗಳಿಂದ 2.29ಲಕ್ಷಕ್ಕೂ ಅಧಿಕ ಮಂದಿಯನ್ನು ಮೊದಲೇ ಸ್ಥಳಾಂತರಿಸಲಾಗಿತ್ತು. ರಾಯಗಡ, ಸಾತಾರಾ, ರತ್ನಗಿರಿ, ಥಾಣೆಯಲ್ಲಿ ಗಣನೀಯ ಸಾವು ಸಂಭವಿಸಿವೆ.

Spread the love

Related Articles

Leave a Reply

Your email address will not be published. Required fields are marked *

Back to top button