Breaking NewsLatestಕಲಬುರ್ಗಿಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ
ಭೂಸ್ವಾಧೀನ ಕಚೇರಿ ಮೇಲೆ ಎಸಿಬಿ ದಾಳಿ: ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯವಸ್ಥಾಪಕ

ಕಲಬುರಗಿ: ಎಸಿಬಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಲಂಚ ಪಡೆಯುತ್ತಿದ್ದ ಭೂಸ್ವಾಧೀನ ಇಲಾಖೆ ವ್ಯವಸ್ಥಾಪಕನನ್ನು ಖೆಡ್ಡಾಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರಗಿಯ ಭೂಸ್ವಾಧೀನ ಇಲಾಖೆ ಕಛೇರಿ ವ್ಯವಸ್ಥಾಪಕ ಶರಣಬಸಪ್ಪ ಜಾಲಹಳ್ಳಿ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ. ಭೂಸ್ವಾಧೀನ ಪರಿಹಾರ ಚೆಕ್ ನೀಡಲು ಶೇ.1 ರಷ್ಟು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ.
ಸುರಪೂರದ ರೈತ ರಾಜಾ ನಾಯಕ್ ಎಂಬ ರೈತನಿಗೆ ಭೂಸ್ವಾಧೀನದ ಪರಿಹಾರವಾಗಿ 14 ಲಕ್ಷ 85 ಸಾವಿರ ಮೊತ್ತದ ಚೆಕ್ ನೀಡಲು 14,850 ರೂಪಾಯಿ ಲಂಚದ ಬೇಡಿಕೆ ಇಟ್ಟು, ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಶರಣಬಸಪ್ಪ ಜಾಲಹಳ್ಳಿಯನ್ನು ಹಿಡಿದಿದ್ದಾರೆ.
ರೈತ ರಾಜಾ ನಾಯಕ್ ನೀಡಿದ ದೂರಿನ ಅನ್ವಯ ಎಸಿಬಿ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಶರಣಬಸಪ್ಪ ಜಾಲಹಳ್ಳಿಯನ್ನು ಅರೆಸ್ಟ್ ಮಾಡಲಾಗಿದೆ.
