Breaking NewsLatestರಾಷ್ಟ್ರೀಯಸುದ್ದಿ
ರಿಲಯನ್ಸ್ ಇಂಡಸ್ಟ್ರೀಸ್ ಸ್ವತಂತ್ರ ನಿರ್ದೇಶಕರಾಗಿ ಕುಂದಾಪುರದ ಕೆವಿ ಕಾಮತ್ ನೇಮಕ

ಮುಂಬೈ: ಕುಂದಾಪುರ ಮೂಲದ ಕನ್ನಡಿಗರಾದ ಕೆವಿ ಕಾಮತ್ ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ 74 ವರ್ಷದ ಕುಂದಾಪುರ ವಾಮನ ಕಾಮತ್ 5 ವರ್ಷಗಳ ಅವಧಿಗೆ ರಿಲಯನ್ಸ್ ಇಂಡಸ್ಟ್ರೀಸ್ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಐಐಎಂ ಅಹಮದಾಬಾದ್ನ ಪದವೀಧರರಾದ ಕೆ.ವಿ. ಕಾಮತ್ ಖ್ಯಾತ ಬ್ಯಾಂಕರ್ ಆಗಿದ್ದು, ಅವರು 1971ರಲ್ಲಿ ಐಸಿಐಸಿಐ ಬ್ಯಾಂಕ್ನಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. 1988ರಲ್ಲಿ ಅವರು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)ಗೆ ತೆರಳಿದರು. 1996ರಲ್ಲಿ ಐಸಿಐಸಿಐಗೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿ ನೇಮಕಗೊಂಡರು. 2009ರಲ್ಲಿ ಕೆವಿ ಕಾಮತ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನಿವೃತ್ತರಾದರು. ಬಳಿಕ 2015ರವರೆಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
