Breaking NewsLatestಮೆಟ್ರೋರಾಜಕೀಯ

ಶಾಸಕ ಜಮೀರ್​ ಅಹ್ಮದ್​ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು ಮಂಗಳವಾರ ರಾತ್ರಿ ​ಶಾಸಕ ಜಮೀರ್​ ಅಹ್ಮದ್ ಅವರ​ ಮನೆಗೆ ಭೇಟಿ ನೀಡಿ ಇಡಿ ದಾಳಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಇತ್ತೀಚೆಗೆ ಶಾಸಕ ಜಮೀರ್​ ಅಹ್ಮದ್​ ನಿವಾಸ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಅವರು ಕಂಟೋನ್ಮೆಂಟ್ ಸಮೀಪ ಇರುವ ಜಮೀರ್​ ನಿವಾಸಕ್ಕೆ ಭೇಟಿ ನೀಡಿ ಮುಂದಿನ ಕಾನೂನು ಹೋರಾಟದ ಬಗ್ಗೆ ಸಲಹೆ ನೀಡಿದ್ದಾರೆ.

ಜಮೀರ್​ಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್​, ಅಕ್ರಮ ಆಸ್ತಿ ಸಂಪಾದನೆ ಇದ್ದರೆ ಐಟಿ ದಾಳಿಯಾಗಬೇಕು. ಇಡಿ ಯವರು ದಾಳಿ ಮಾಡುವ ಅವಶ್ಯಕತೆಯಿಲ್ಲ. ಇದು ರಾಜಕೀಯ ಪ್ರೇರಿತವಾದ ದಾಳಿಯಿರಬಹುದು. ಇಡಿ ತನಿಖೆಯನ್ನ ನಾನು ಅನುಭವಿಸಿದ್ದೇನೆ. ನಿಮ್ಮ ಹಿಂದೆ ಪಕ್ಷ ಇದೆ, ನಾವಿದ್ದೇವೆ ಹೆದರಬೇಡಿ. ಕಾನೂನು ಮೂಲಕವೇ ಇದೆಲ್ಲವನ್ನೂ ಎದುರಿಸೋಣ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button