Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಜೇಮ್ಸ್ ಚಿತ್ರದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ: ಸುದೀಪ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ನೇಹ ಜೀವಿ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತೇ ಇದೆ. ಕನ್ನಡ ಮಾತ್ರವಲ್ಲ ಪರಭಾಷೆಯ ಕಲಾವಿದರೊಂದಿಗೂ ಅಪ್ಪು ಉತ್ತಮ ಬಾಂದವ್ಯ ಹೊಂದಿದ್ದರು. ಅದಕ್ಕೆ ಅಪ್ಪು ಅಮರ ಹೊಂದಿದಾಗ ಬಂದ ಅಭಿಮಾನಿಗಳು, ಕಲಾವಿದರು, ಚಿತ್ರರಂಗದವರೇ ಸಾಕ್ಷಿ. ಇದೀಗ ಜೇಮ್ಸ್ ಸಿನಿಮಾದ ಹಾಡನ್ನ ಬಿಡುಗಡೆ ಮಾಡಿದ ಸುದೀಪ್ ಅಪ್ಪು ಅವರನ್ನ ಕೊಂಡಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲ್ಯದಿಂದಲೂ ಸ್ನೇಹಿತರು. ಅಪ್ಪು ಅವರನ್ನ ಕಂಡರೆ ಸುದೀಪ್ ಗೆ ಅಚ್ಚುಮೆಚ್ಚು. ಅಪ್ಪು ಇನ್ನಿಲ್ಲ ಎಂದು ಗೊತ್ತಾದಾಗ ಸುದೀಪ್ ಅದೆಷ್ಟೋ ಭಾರಿ ಕಣ್ಣೀರು ಹಾಕಿದ್ದರು. ಪುನೀತ್ ಅನುಪಸ್ಥಿತಿಯಲ್ಲಿ ಜೇಮ್ಸ್ ಸಿನಿಮಾದ ಬಿಡುಗಡೆಗೆ ವೇದಿಕೆ ಸಿದ್ದವಾಗುತ್ತಿದ್ದು ಇದೀಗ ಚಿತ್ರದ ಸಲಾಮ್ ಸೋಲ್ಜರ್ ಹಾಡನ್ನ ಸುದೀಪ್ ಬಿಡುಗಡೆ ಮಾಡಿದ್ದಾರೆ.

ಸಲಾಮ್ ಸೋಲ್ಜರ್ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ ಸುದೀಪ್ ಈ ಕುರಿತು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದೊಡ್ಡ ಪರದೆಯಲ್ಲಿ ಪುನೀತ್ ಅವರ ಇರುವಿಕೆಯನ್ನು ಸಂಭ್ರಮಿಸುವ ಕಾಲ ಇದು. ಮುತ್ತಿನಂಥ ವ್ಯಕ್ತಿತ್ವದ ಅವರಿಗೆ ಬೇರೆ ಯಾರು ಸರಿಸಾಟಿ ಇಲ್ಲ. ಜೇಮ್ಸ್ ಸಿನಿಮಾದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ಚಿತ್ರದ ಲಿರಿಯಲ್ ವಿಡಿಯೋ ಬಿಡುಗಡೆ ಆಗಿದ್ದು ಅದರ ಲಿಂಕ್ ಗಳನ್ನ ಸುದೀಪ್ ಶೇರ್ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button