Breaking NewsLatestರಾಜ್ಯರಾಷ್ಟ್ರೀಯ
ಕೋವಿಡ್ ನಿಬಂಧನೆ; ಕರ್ನಾಟಕದ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಆಕ್ಷೇಪ

ತಿರುವನಂತಪುರ: ಕೋವಿಡ್ ನಿರ್ವಹಣೆ ವಿಷಯದಲ್ಲಿ ಕೇಂದ್ರ ಸರ್ಕಾರದ ಆದೇಶದಲ್ಲೇ ಇಲ್ಲದ ನಿಬಂಧನೆಗಳನ್ನು ಕರ್ನಾಟಕ ಸರ್ಕಾರ ಹೇರಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ಷೇಪಿಸಿದ್ದಾರೆ.
ಗಡಿಯಲ್ಲಿ ಪ್ರವೇಶಿಸುವವರಿಗೆ 72 ಗಂಟೆಗಳ ಅವಧಿಯೊಳಗಿನ ಆರ್‌ಟಿಪಿಸಿಆರ್ ನೆಗೆಟೀವ್ ಪ್ರಮಾಣಪತ್ರವನ್ನು ಕರ್ನಾಟಕ ಸರ್ಕಾರ ಕಡ್ಡಾಯಗೊಳಿಸಿರುವ ಸಂಬಂಧ ವಿಧಾನಸಭೆಯಲ್ಲಿ ಪ್ರತಿಪಕ್ಷದವರು ಪ್ರಸ್ತಾಪಿಸಿದ ವಿಷಯಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
ಕೇಂದ್ರದ ಸಚಿವಾಲಯದಿಂದ ಬಂದ ಆದೇಶದನ್ವಯ ರಾಜ್ಯಗಳು ತಮ್ಮ ಗಡಿಗಳನ್ನು ಸಂಪೂರ್ಣ ಮುಚ್ಚುವ ಮೂಲಕ ಸಂಚಾರದ ಮೇಲೆ ನಿರ್ಬಂಧ ಹೇರುವಂತಿಲ್ಲ. ಕಾರಣಗಳಿಲ್ಲದೆ ಯಾರಾದರೂ ಸಂಚಾರ ಮಾಡಿದರೆ ನಿರ್ಬಂಧ ವಿಧಿಸುವುದು ತಪ್ಪಲ್ಲ. ಹೀಗಾಗಿ ಕರ್ನಾಟಕದ ಹೊಸ ನಿಯಮಗಳಿಂದ ರಾಜ್ಯದ ಜನರಿಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಿಣರಾಯ್ ವಿಜಯನ್ ತಿಳಿಸಿದ್ದಾರೆ.
