Breaking Newsಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವವರ ಮೇಲೆ ನಿಗಾ ಇಡಿ: ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್

ಧಾರವಾಡ: ಜಿಲ್ಲೆಯಲ್ಲಿ ಕೊರೊನಾದ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದ್ದು, ಸಂಭವನೀಯ ಮೂರನೇ ಅಲೆ ಕುರಿತು ತಜ್ಞರ ಸಮಿತಿ ಎಚ್ಚರಿಕೆಗಳನ್ನು ನೀಡುತ್ತಿದ್ದು, ಹಾಗಾಗಿ ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆಯನ್ನು ಎದುರಿಸಲು ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಧಾರವಾಡ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅಧಿಕಾರಿಗಳಿ ಸೂಚನೆ ನೀಡಿದರು.

ಈ ಕುರಿತು ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಸೇರಿದಂತೆ, ಜಿಲ್ಲಾ ಪಂಚಾಯತಿ ಸಿಇಓ, ಡಿಹೆಚ್‌ಓ ಅಧಿಕಾಗರಿಗಳಿಂದ ಎರಡನೇ ಅಲೆಯ ಸೋಂಕಿನ ಕುರಿತು ಅಂಕಿ ಅಂಶಗಳನ್ನು ಪಡೆದುಕೊಂಡರು.

ಬಳಿಕ ಸಭೆಯಲ್ಲಿ ಮಾತನಾಡಿದ ಸಚಿವ ಜಗದೀಶ ಶೆಟ್ಟರವರು, ಜಿಲ್ಲೆಯ ಕೋವಿಡ್ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಸಕ್ರಿಯ ಪ್ರಕರಣಗಳು 267 ಇವೆ. ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ, ಪೊಲೀಸ್, ಆರೋಗ್ಯ, ಕಿಮ್ಸ್, ಗ್ರಾಮೀಣಾಭಿವೃದ್ಧಿ, ಮಹಾನಗರ ಪಾಲಿಕೆ ಸೇರಿದಂತೆ ಇತರೆ ಇಲಾಖೆಗಳು ಶ್ರಮಿಸಿವೆ. ಆದರೆ ಈಗ ಮೂರನೇ ಅಲೆಯ ಮುನ್ಸೂಚನೆಗಳು ಬರತೋಡಗಿವೆ, ಹಾಗಾಗಿ ಮಹಾರಾಷ್ಟ್ರ ರಾಜ್ಯಂದಿದ ಜಿಲ್ಲೆಗೆ ಆಗಮಿಸುವವರ ಮೇಲೆ ಜಿಲ್ಲಾಡಳಿತ ನಿಗಾ ಇಡಬೇಕು ಎಂದು ಸೂಚಿದರು.

ಮಕ್ಕಳಿಗಾಗಿ 750 ಬೆಡ್‌ಗಳ ಸಿದ್ಧತೆಗೆ ಸೂಚನೆ:

ಕೋವಿಡ್ ಮೂರನೆ ಅಲೆಯು ಮಕ್ಕಳಿಗೆ ಹೆಚ್ಚಾಗಿ ಬಾಧಿಸುವ ಸಂಭವವಿದೆ. ತಜ್ಞರ ಸಮಿತಿಯು ಜಿಲ್ಲೆಯ 500 ಮಕ್ಕಳು ಕೋವಿಡ್ ನಿಂದ ತೀವ್ರತರನಾಗಿ ಬಾಧಿತರಾಗಬಹುದು ಎಂಬ ವರದಿ ನೀಡಿದೆ. ಈ ಹಿನ್ನೆಯಲ್ಲಿ‌ ಜಿಲ್ಲೆಯಲ್ಲಿ 750 ಬೆಡ್‌ಗಳನ್ನು ಮಕ್ಕಳಿಗಾಗಿ ಸಿದ್ದಪಡಿಸಬೇಕು, ಕಿಮ್ಸ್ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಅದೂ ಕೂಡಾ ಆಗಸ್ಟ್ 15 ರ ವೇಳೆಗೆ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವುದು. ಇದರಿಂದ ಕಿಮ್ಸ್ ಒಂದರಲ್ಲೇ 600 ಬೆಡ್‌ಗಳು ಮಕ್ಕಳಿಗೆ ಸಿಗಿತ್ತವೆ ಈ ಎಲ್ಲ ಕಡೆಗಳಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಬೆಕು ಎಂದು ತಿಳಿಸಿದರು‌.

Spread the love

Related Articles

Leave a Reply

Your email address will not be published. Required fields are marked *

Back to top button