ಕಾಂತಾರ ದಾಖಲೆ: 100 ಕೋಟಿ ರೂ. ಕ್ಲಬ್ ಸೇರಿದ 6ನೇ ಕನ್ನಡದ ಚಿತ್ರ

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾಗಿ ಉತ್ತಮ ವಿಮರ್ಶೆಗಳು ಪಡೆದಿತ್ತು. ಇನ್ನು ಕಳೆದ ವಾರ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಕಂಡಿದ್ದ ಕಾಂತಾರ ಅದ್ಭುತ ಓಪನ್ ಪಡೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ.
ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾಗಿ ಉತ್ತಮ ವಿಮರ್ಶೆಗಳು ಪಡೆದಿತ್ತು. ಇನ್ನು ಕಳೆದ ವಾರ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಕಂಡಿದ್ದ ಕಾಂತಾರ ಅದ್ಭುತ ಓಪನ್ ಪಡೆದಿದೆ.ದಿನದಿಂದ ದಿನಕ್ಕೆ ತನ್ನ ಕಲೆಕ್ಷನ್ ಅನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾಂತಾರ ಇದೀಗ ವಿಶ್ವದಾದ್ಯಂತ 119 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿದ 6ನೇ ಕನ್ನಡ ಚಿತ್ರವಾಗಿದೆ.
ಕರ್ನಾಟಕದಲ್ಲಿ ಕಾಂತಾರ ಸಿನಿಮಾ ಹಾಲ್ಗಳು ಇನ್ನೂ ತುಂಬಿ ತುಳುಕುತ್ತಿದೆ. ಇದರ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಚಿತ್ರ ಬಿಡುಗಡೆಯಾಗಿದೆ. ಹೀಗಾಗಿ ಚಿತ್ರದ ಕಲೆಕ್ಷನ್ ಮತ್ತಷ್ಟು ಜಾಸ್ತಿಯಾಗಲಿದೆ.
ಇನ್ನು ಕಳೆದ ಶನಿವಾರ 14 ಕೋಟಿ ಹಾಗೂ ಭಾನುವಾರ 18 ಕೋಟಿ ಕಲೆಕ್ಷನ್ ಮಾಡಿದೆ.
