Breaking NewsLatestರಾಜಕೀಯರಾಷ್ಟ್ರೀಯ

ಕನ್ನಯ್ಯ ಕುಮಾರ್, ಜಿಗ್ನೇಶ್ ಮೇವಾನಿ ಕಾಂಗ್ರೆಸ್​ಗೆ

ನವದೆಹಲಿ: ಮಾಜಿ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಮತ್ತು ಗುಜರಾತ್ ದಲಿತ ನಾಯಕ ಜಿಗ್ನೇಶ್ ಮೇವಾನಿ ಮಂಗಳವಾರ ಕಾಂಗ್ರೆಸ್​ ಸೇರಿದರು. ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ದಮ್ಮುಖದಲ್ಲಿ ಈ ಇಬ್ಬರೂ ನಾಯಕರು ಕಾಂಗ್ರೆಸ್​ಗೆ ಸೇರ್ಪಡೆಯಾದರು.

ಕನ್ನಯ್ಯ ಕುಮಾರ್ ಈ ಮೊದಲು ಸಿಪಿಐನಲ್ಲಿದ್ದರು. 2019ರ ಮಹಾ ಚುನಾವಣೆಗೆ ಮೊದಲು ಅವರು ಸಿಪಿಐ ಸೇರಿದ್ದರು. ಬಳಿಕ ಅವರು ತಮ್ಮ ತವರುನೆಲವಾದ ಬಿಹಾರ್​ನ ಬಗುಸರಾಯ್​ನಿಂದ ಸ್ಪರ್ಧಿಸಿದರೂ, ಬಿಜೆಪಿಯ ಗಿರಿರಾಜ್ ಇಸಂಗ್ ವಿರುದ್ಧ ಸೋತರು.

ಇನ್ನು ಗುಜರಾತ್​ನ ವಡ್ಗಾಮ್ ಕ್ಷೇತ್ರದ ಶಾಸಕರಾಗಿರುವ ಮೆವಾನಿ ಕಾಂಗ್ರೆಸ್ ಸೇರ್ಪಡೆ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button