Breaking NewsLatestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಇವನೇ ನನ್ನ ತಂದೆಯನ್ನು ಗುಂಡಿಟ್ಟು ಕೊಂದಿದ್ದು: ನ್ಯಾಯಧೀಶರ ಮುಂದೆ ಕಣ್ಣೀರಿಟ್ಟ ಕಲಬುರ್ಗಿ ಪುತ್ರಿ

ಇವನೇ ನನ್ನ ತಂದೆಗೆ ಗುಂಡು ಹೊಡೆದಿದ್ದು. ಹೊರಗಡೆ ರಸ್ತೆಯಲ್ಲಿ ಬೈಕ್ ನಲ್ಲಿ ಕುಳಿತುಕೊಂಡಿದ್ದ ಮತ್ತೋರ್ವ ಆರೋಪಿ ಈತನನ್ನ ಬೈಕ್ ಮೇಲೆ ಕೂರಿಸಿಕೊಂಡ ಹೋದ ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಪುತ್ರಿ ರೂಪದರ್ಶಿ ನ್ಯಾಯಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ.

ಕಲಬುರ್ಗಿ ಅವರನ್ನ ಹತ್ಯೆ ಮಾಡಿ ಏಳು ವರ್ಷಗಳು ಕಳೆದಿದ್ದು. ಪ್ರಕರಣದ ಪ್ರಮುಖ ಆರೋಪಿಗಳಾದ ಗಣೇಶ ಮಿಸ್ಕಿನ್, ಅಮೂಲ್ ಕಾಳೆ, ಅಮಿತ್ ಬದ್ದಿ, ವಾಸುದೇವ ಸೂರ್ಯವಂಶಿ, ಪ್ರವೀಣ ಚತುರ್ ಅವರುಗಳನ್ನ ಈ ಹಿಂದೆಯೇ ವಿಚಾರಣೆ ಮಾಡಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಎರಡು ವರ್ಷ ಕಲಾಪಗಳೇ ನಡೆದಿರಲಿಲ್ಲ.

ಸದ್ಯ ಎರಡು ವರ್ಷಗಳ ಬಳಿಕ ಆರೋಪಿಗಳ ವಿಚಾರಣೆ ಧಾರವಾಡ ನ್ಯಾಯಾಲಯದಲ್ಲಿ ಆರಂಭಗೊಂಡಿದೆ. ಈ ವೇಳೆ ಆರೋಪಿಗಳನ್ನ ಗುರುತಿಸಿದ ಕಲಬುರ್ಗಿ ಅವರ ಪುತ್ರಿ ರೂಪದರ್ಶಿ ಕಣ್ಣೀರು ಹಾಕುತ್ತಲೇ ಆಕ್ರೋಶದಿಂದ ಇವನೇ ಗುಂಡು ಹೊಡೆದಿದ್ದು ಅಂತಾ ಹೇಳಿದ್ದಾರೆ. ಅಲ್ಲದೆ ಅಂದು ಮಿಸ್ಕಿನ್ ಗುಂಡು ಹೊಡೆದಿದ್ರೆ, ಹೊರಗಡೆ ರಸ್ತೆಯಲ್ಲಿ ಬೈಕ್ ಮೇಲೆ ಮತ್ತೋರ್ವ ಆರೋಪಿ ಕುಳಿತಿದ್ದು ಆತನೇ ಮಿಸ್ಕಿನ್‌ನನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾಗಿ ರೂಪದರ್ಶಿ ಹೇಳಿದ್ದಾರೆ.

ಘಟನೆ ವಿವರ:

2015ರ ಆಗಸ್ಟ್ 30ರಂದು ಬೆಳಗಿನ ಜಾವ ಕಲಬುರ್ಗಿಯವರು ಕಲ್ಯಾಣ ನಗರದಲ್ಲಿನ ತಮ್ಮ ಮನೆಯಲ್ಲಿ ಕುಳಿತಿದ್ದಾಗ, ಮನೆಗೆ ಬಂದ ಆಗಂತುಕರು ಬಾಗಿಲು ಬಡೆದಿದ್ದರು. ಆಗ ಹೊರಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆಯೇ ಕಲಬುರ್ಗಿಯವರ ತಲೆಗೆ ಗುಂಡು ಹೊಡೆದು ಆರೋಪಿಗಳು ಬೈಕ್ ನಲ್ಲಿ ಪರಾರಿಯಾಗಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button