Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿ

ಹಿರಿಯ ನಟ ರಾಜೇಶ್ ನಿಧನಕ್ಕೆ ಸಚಿವ ಗೋಪಾಲಯ್ಯ ಕಂಬನಿ

ಬೆಂಗಳೂರು: ಹಿರಿಯ ನಟ ರಾಜೇಶ್ ನಿಧನಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಕಂಬನಿ ಮಿಡಿದಿದ್ದಾರೆ. ವರನಟ ಡಾ. ರಾಜ್ ಕುಮಾರ್ ಸಮಕಾಲೀನವರಾದ ರಾಜೇಶ್ ಕನ್ನಡ ಚಿತ್ರಗಳಲ್ಲಿ ನಾಯಕನಟರಾಗಿ, ಪೋಷಕನಟರಾಗಿ ಕನ್ನಡಿಗರ ಮನದಲ್ಲಿ ನೆಲೆಸಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ಸಚಿವರು ಹೇಳಿದ್ದಾರೆ.

ಕಲಾತಪಸ್ವಿ ರಾಜೇಶ್ ಎಂಬುದು ಅವರ ಆತ್ಮಚರಿತ್ರೆಯ ಹೆಸರು. ಅಂದಿನ ದಿನಗಳಲ್ಲಿ ತಮಿಳು ಚಿತ್ರರಂಗದಿಂದ ಅವಕಾಶ ಬಂದಿದ್ದರೂ ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಕನಸು ಹೊಂದಿದ್ದ ರಾಜೇಶ್ ಬೇರೆ ಭಾಷೆಯಿಂದ ಅವಕಾಶಗಳು ಬಂದಾಗ ನಯವಾಗಿ ನಿರಾಕರಿಸುವ ಮೂಲಕ ಕನ್ನಡದ ಮೇಲಿರುವ ತಮ್ಮ ಅಭಿಮಾನವನ್ನು ತೋರಿಸಿದ್ದರು.

ರಾಜೇಶ್ ನಿಧನದಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕಟುಂಬಕ್ಕೆ ಹಾಗೂ ನಾಡಿನ ಸಮಸ್ತರಿಗೆ ದೇವರು ಕರುಣಿಸಲಿ ಎಂದು ಗೋಪಾಲಯ್ಯ ಸಂತಾಪ ಸೂಚಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button