Breaking NewsLatestರಾಷ್ಟ್ರೀಯ
ಜಾನ್ಸನ್ & ಜಾನ್ಸನ್ ತಯಾರಿತ ಲಸಿಕೆ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

ನವದೆಹಲಿ: ಅಮೆರಿಕಾದ ಅತಿ ದೊಡ್ಡ ಔಷಧೀಯ ಕಂಪನಿ ಜಾನ್ಸನ್ ಅಂಡ್ ಜಾನ್ಸನ್ ತಯಾರಿಸಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತ ಅನುಮತಿ ಕೊಟ್ಟಿದೆ.
ಶನಿವಾರ ಈ ವಿಚಾರವನ್ನು ಕೆಂದ್ರ ಆರೋಗ್ಯ ಸಚಿವ ಮನಸ್ಸುಖ್ ಮಾಂಡವೀಯ ತಿಳಿಸಿದ್ದಾರೆ.
ಈ ಲಸಿಕೆಗೆ ಅನುಮತಿ ನೀಡುವುದರೊಂದಿಗೆ ಭಾರತದಲ್ಲಿ ತುರ್ತು ಬಳಕೆಗೆ ಬಳಸಲು ಲಭ್ಯವಿರುವ ವ್ಯಾಕ್ಸಿನ್ಗಳ ಸಂಖ್ಯೆ 5ಕ್ಕೆ ಏರಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
