Breaking NewsLatestರಾಜ್ಯರಾಷ್ಟ್ರೀಯಸುದ್ದಿ
‘ಜಿಹಾದ್’ ಇಸ್ಲಾಂನಲ್ಲಿ ಮಾತ್ರವಲ್ಲ, ಭಗವದ್ಗೀತೆಯಲ್ಲೂ ಇದೆ: ಶಿವರಾಜ್ ಪಾಟೀಲ್

ಜಿಹಾದ್ ಎನ್ನುವುದು ಕೇವಲ ಇಸ್ಲಾಂ ನಲ್ಲಿ ಮಾತ್ರವಲ್ಲ ಭಗವದ್ಗೀತೆ ಹಾಗೂ ಕ್ರೈಸ್ತ ಧರ್ಮದಲ್ಲೂ ಇದೆ ಎಂದು ಮಾಜಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಶಿವರಾಜ್ ಪಾಟೀಲ್, ಮೊಹ್ಸೀನಾ ಕಿದ್ವಾಯಿ ಅವರ ಆತ್ಮ ಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಇಸ್ಲಾಂ ನಲ್ಲಿನ ಜಿಹಾದ್ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ. ಆದರೆ ಮಹಾಭಾರತದಲ್ಲಿ ಶ್ರೀ ಕೃಷ್ಣ, ಅರ್ಜುನನ ಬಳಿ ಜಿಹಾದ್ ಕುರಿತು ಮಾತನಾಡಿದ್ದಾನೆ ಎಂದು ಹೇಳಿದ್ದಾರೆ.
ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಅವರ ಹೇಳಿಕೆ ಕುರಿತು ಕಿಡಿ ಕಾರಿರುವ ಬಿಜೆಪಿ, ಇದು ವೋಟ್ ಬ್ಯಾಂಕ್ ರಾಜಕಾರಣ ಎಂದು ಹೇಳಿದೆ.
