ಜೇಮ್ಸ್ ಗೆ ಭರ್ಜರಿ ಸ್ವಾಗತ: ಚಿತ್ರ ನೋಡುತ್ತ ಕಣ್ಣಿರಿಟ್ಟ ಅಭಿಮಾನಿಗಳು

ಕಲಬುರಗಿ: ಮರೆಯಾದ ಮಾಣಿಕ್ಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆ ಚಿತ್ರ ಜೇಮ್ಸ್ ಇಂದು ತೆರೆ ಕಂಡಿದ್ದು, ಅಭಿಮಾಮಿಗಳು ಭವ್ಯವಾಗಿ ಸ್ವಾಗತ ಮಾಡಿಕೊಂಡರು. ಪುನೀತ್ ಇಲ್ಲದ್ದನ್ನು ನೆನೆದು ಅಭಿಮಾನಿಗಳು ಸಿನಿಮಾ ನೋಡುತ್ತಲೆ ಗಳಗಳನೇ ಅತ್ತರು.
ಅಸಂಖ್ಯಾತ ಅಪ್ಪು ಅಭಿಮಾನಿಗಳು ಜೇಮ್ಸ್ ಖದರ್ ನೋಡಲು ಕಾತುರದಿಂದ ಆಗಮಿಸಿದ್ದಾರೆ. ತಮ್ಮ ನೆಚ್ಚಿನ ನಟ ಇಲ್ಲದ್ದನ್ನು ನೆನೆದು ಭಾವುಕರಾಗಿದ್ದಾರೆ.ಕೆಲವರು ಚಿತ್ರ ಮಂದಿರಲ್ಲಿಯೇ ಕಣ್ಣಿರು ಹಾಕಿದರು. ಕಲಬುರಗಿ ನಗರದ ಸಂಗಮ ಚಿತ್ರ ಮಂದಿರದಲ್ಲಿ ಚಿತ್ರದಲ್ಲಿನ ಪುನಿತ್ ಎಂಟ್ರಿ ಆಗುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತು ಭಾವುಕವಾದರು.
ಇನ್ನು ನೆಚ್ಚಿನ ಪವರ್ ಹೀರೊ ಅಪ್ಪು ನಟನೆಯ ಕೊನೆಯ ಚಿತ್ರ ಜೇಮ್ಸ್ ಚಿತ್ರದ ನೋಡಲು ಅಭಿಮಾನಿಗಳು ನಸುಕಿನ ಜಾವ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ. ನಗರದ ಶೆಟ್ಟಿ ಮಲ್ಟಿ ಪ್ಲೇಕ್ಸ್, ಸಂಗಮ, ತ್ರಿವೇಣಿ, ಮೀರಜ್ ಚಿತ್ರಮಂದಿಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳ ಮುಂದೆ ಅಪ್ಪು ಬೃಹತ್ ಕಟೌಟ್, ಪ್ಲೇಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿವೆ. ಬೆಳಗ್ಗೆ 6-15 ಕ್ಕೆ ಫಸ್ಟ್ ಶೋ ಪ್ರಾರಂಭವಾಗಿದೆ. ಪುನಿತ್ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಟಿಕೇಟ್ ಖರೀದಿ ಮಾಡಿ ಚಿತ್ರ ವಿಕ್ಷಣೆ ಮಾಡುತ್ತಿದ್ದಾರೆ.
