Breaking NewsLatestಕ್ರೈಂಜಿಲ್ಲಾ ಸುದ್ದಿರಾಜಕೀಯರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಗಲಭೆಕೋರರ ಕುಟುಂಬಕ್ಕೆ ಜಮೀರ್ ಸಹಾಯ ಆರೋಪ; ನೆರವು ತಡೆಯುವಂತೆ ಪೊಲೀಸರಿಗೆ ಬಿಜೆಪಿ ಮನವಿ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಬಂಧಿತರ ಮನೆಗೆ ಫುಡ್ ಕಿಟ್, ಧನ ಸಹಾಯಕ್ಕೆ ಮುಂದಾಗಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಮುಸ್ಲಿಂ ಮುಖಂಡರ ನಡೆಯನ್ನು ಖಂಡಿಸಿ, ಯಾವುದೇ ಕಾರಣಕ್ಕೂ ಹಣ ಹಾಗೂ ಫುಡ್ ಕಿಟ್ ವಿತರಣೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಧಾರವಾಡ ಜಿಲ್ಲಾ ಮಟ್ಟದ ನಾಯಕರು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಳೇ ಹುಬ್ಬಳ್ಳಿಯ ಗಲಭೆಗೆ ಸಂಬಂಧಿಸಿದಂತೆ ಇತ್ತೀಚಿಗೆ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸುಮಾರು 200 ಜನರನ್ನು ಬಂಧಿಸಿ ಪೊಲೀಸ್ ಇಲಾಖೆಯವರು ವಿಚಾರಣೆಗೆ ಒಳಪಡಿಸಿದ್ದು ಇದೊಂದು ಸೂಕ್ಷ್ಮ ವಿಷಯವಾಗಿದೆ. ಇಂಹತ ಕ್ಲಿಷ್ಟಕರ ಸಮಯದಲ್ಲಿ ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್ ಹಾಗೂ ಸ್ಥಳೀಯ ಶಾಸಕರು, ಮುಸ್ಲಿಂ ಮುಖಂಡರು ಸಮಾಜ ಘಾತುಕ ದುಷ್ಟಶಕ್ತಿಗಳ ಪರಿವಾರದವರಿಗೆ ಸಹಾಯ ಮಾಡುತ್ತಿರುವುದು ಸರಿಯಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿದ್ದು ಭಾರತೀಯ ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಾಂತವಾಗಿದ್ದ ಹುಬ್ಬಳ್ಳಿಯನ್ನು ಉದ್ದೇಶ ಪೂರ್ವಕವಾಗಿ ಗಲಭೆ ಸೃಷ್ಟಿಮಾಡಿ ಶಾಂತಿಗೆ ಭಂಗ ಮಾಡಿದ್ದು, ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿ ಪೊಲೀಸರಿಗೆ ಕಲ್ಲು ತೂರಿ ಗಾಯಗೊಳಿಸಿದ ಇಂತಹ ದುಷ್ಟಶಕ್ತಿಗಳಿಗೆ ನಾವು ಯಾವುದೇ ರೀತಿ ದಿನಸಿ ಕಿಟ್ ಆಗಲಿ ಧನ ಸಹಾಯ ಮಾಡುವುದನ್ನು ನಮ್ಮ ಪಕ್ಷ ವಿರೋಧಿಸುತ್ತದೆ. ಯಾವುದೇ ಕಾರಣಕ್ಕೂ ಕಿಟ್ ವಿತರಣೆ ಮಾಡಲು ಅವಕಾಶವನ್ನು ನೀಡಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ್ ನೇತೃತ್ವದಲ್ಲಿ ಹುಬ್ಬಳ್ಳಿಯ ಸಹಾಯಕ ಪೊಲೀಸ್ ಆಯುಕ್ತರಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ್ದಾರೆ.‌

Spread the love

Related Articles

Leave a Reply

Your email address will not be published. Required fields are marked *

Back to top button