Breaking NewsLatestರಾಷ್ಟ್ರೀಯಸುದ್ದಿ

ದೀಪಾವಳಿ ನಾಲ್ಕ ದಿನಾ ಇರಾಕ್ ಒಬಾಮಾ ಬರಾಕ್

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮಾ ಅವರು ಶೇರ್ವಾನಿ ತೊಟ್ಟು ಯಾಕೆ ಹೀಗೆ ಗಂಭೀರವದನರಾಗಿದ್ದಾರೆ?

ಅಳತೆ ಸರಿ ಹೋಗುತ್ತಿಲ್ಲವೆ, ಬಣ್ಣ ಇಷ್ಟವಾಗಿಲ್ಲವೆ, ಶೇರ್ವಾನಿ ನಿಮಗೊಪ್ಪುವುದಿಲ್ಲ ಎಂದು ಎದುರಿಗೆ ನಿಂತ ಮಿಶೆಲ್​ ಹೇಳುತ್ತಿದ್ದಾರೆಯೇ? ಅಥವಾ ಯಾವ ನಾಟಕಕ್ಕೆ ಬರಾಕ್​ ಹೀಗೆ ಬಣ್ಣ ಹಚ್ಚಿಕೊಂಡು ವೇಷ ತೊಟ್ಟುಕೊಂಡಿದ್ದೋ? ಒಟ್ಟಿನಲ್ಲಿ ಗೊಂದಲ ಉಂಟಾಗ್ತಿದೆಯಲ್ಲವಾ? ಹೌದು, ಶೇರ್ವಾನಿ ಧರಿಸಿರುವ ಈ ಆಕೃತಿಯ ಫೋಟೋ ಅಂತರ್ಜಾಲದಲ್ಲಿ ಓಡಾಡುತ್ತಿದ್ದಂತೆ, ‘ಓಹೋ ದೀಪಾವಳಿಗೆ ತಯಾರಾಗಿ ಬಂದಿದ್ದಾರಾ ಒಬಾಮಾ ಸಾಹೇಬ್ರು’ ಎಂದು ನೆಟ್ಟಿಗರು ತಮಾಷೆ ಮಾಡುತ್ತಾ ರೀಟ್ವೀಟ್ ಮಾಡುತ್ತಿದ್ದಾರೆ.

400 ಜನರು ಈ ಪೋಸ್ಟ್​ ಅನ್ನು ರೀಟ್ವೀಟ್​ ಮಾಡಿ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಶೇರ್ವಾನಿ ಬಣ್ಣ ಸ್ವಲ್ಪ ಗಾಢವಾಯಿತಲ್ಲ?’ ಎಂದಿದ್ದಾರೆ ಒಬ್ಬರು. ಇನ್ನೂ ಒಬ್ಬರು ಬರಾಕ್​ ಒಬಾಮಾ ಅವರ ಕುಟುಂಬದ ಫೋಟೋ ಅನ್ನು ತಮಿಳಿನ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶಾಪ್​ ಮಾಡಿ ಟ್ವೀಟ್ ಮಾಡಿದ್ದಾರೆ. ಯಾರೋ ಒಬ್ಬರು, ‘ದೀಪಾವಳಿಯ ಶುಭಾಶಯಗಳು ಮಿಶೆಲ್​’ ಎಂದು ಶುಭ ಕೋರಿದ್ದಾರೆ. ‘ಅರೆ ಹೌದಲ್ಲ ಇದು ಬರಾಕ್​ ಥರಾನೇ ಕಾಣ್ತಾ ಇದೆ, ಯಾಕೆ ಹೀಗೆ? ಎಂದು ಮತ್ತೊಬ್ಬರು ಕೇಳಿದ್ದಾರೆ. ‘ಬರಾಕ್ ಶೇರ್ವಾನಿ ಹಾಕಿಕೊಂಡರೆ, ಮಿಶೆಲ್​ ಏನು ತೊಟ್ಟುಕೊಳ್ಳಬಹುದು?’ ಎಂದು ಪ್ರಶ್ನಿಸಿದ್ದಾರೆ ಇನ್ನೂ ಒಬ್ಬರು. ‘ಚಾಂದನೀ ಚೌಕ್​ಗೆ ಸ್ವಾಗತ’ ಎಂದು ಸ್ವಾಗತಿಸಿದ್ದಾರೆ ಮತ್ತೊಬ್ಬರು.

ಎರಡು ದಿನಗಳ ಹಿಂದೆ ಟ್ವೀಟ್ ಮಾಡಲಾದ ಈ ಪೋಸ್ಟ್​ ಅನ್ನು ಸುಮಾರು 5,000 ಜನರು ಇಷ್ಟಪಟ್ಟಿದ್ದಾರೆ. ಈ ಆಕೃತಿ ಥೇಟ್​ ಬರಾಕ್​ ಒಬಾಮಾ ಅವರಂತೆಯೇ ಇದೆ ಎನ್ನುವುದನ್ನು ನೀವು ಒಪ್ಪುತ್ತೀರಾ?

Spread the love

Related Articles

Leave a Reply

Your email address will not be published. Required fields are marked *

Back to top button