ಪಾಕ್ ವಿರುದ್ದ ಭಾರತದ ಜಯಬೇರಿ..! ಶಿಳ್ಳೆ ಹೊಡೆದು ಸಂಭ್ರಮಿಸಿದ ಅಫ್ಘಾನಿಗರು!

ಭಾನುವಾರ ನಡೆದ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನ ಮಣಿಸಿ ಭಾರತದ ಪುರುಷರ ಕ್ರಿಕೆಟ್ ತಂಡ ರೋಚಕ ಜಯ ಪಡೆದಿತ್ತು. ಇದಕ್ಕೆ ದೇಶದಲ್ಲಿರೋ ಕ್ರಿಕೆಟ್ ಪ್ರೇಮಿಗಳು ಹಾಗೂ ದೇಶದ ಹೊರಗಿರೋ ಟೀಂ ಇಂಡಿಯಾ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿದ್ರು.
ಈಗ ಇಂಟ್ರಸ್ಟಿಂಗ್ ವಿಚಾರ ಏನಂದ್ರೆ ಭಾರತ ಗೆದ್ದಿದ್ದಕ್ಕೆ ಅತ್ತ ಅಫ್ಘಾನಿಸ್ತಾನದಲ್ಲೂ ಸಂಭ್ರಮಾಚರಣೆ ಮಾಡಲಾಗಿದೆ. ಇಡೀ ಕ್ರಿಕೆಟ್ ಜಗತ್ತು ಕಾತುರದಿಂದ ನೋಡ್ತಿದ್ದ ಈ ಹೈವೊಲ್ಟೇಜ್ ಮ್ಯಾಚ್‌ನ ಕೊನೇ ವೋವರ್‌ನ ಕೊನೇ ಬಾಲ್‌ನಲ್ಲಿ ಆಶ್ವಿನ್, ನಾಲ್ಕು ರನ್‌ಗಳನ್ನ ಪೇರಿಸುವ ಮೂಲಕ ಭಾರತಕ್ಕೆ ಗೆಲುವಿನ ಮುಕ್ತಾಯ ಹಾಡಿದ್ರು. ಈ ವೇಳೆ ಅಫ್ಘಾನಿಸ್ತಾನದಲ್ಲಿ ಈ ಪಂದ್ಯವನ್ನ ವೀಕ್ಷಿಸುತ್ತಿದ್ದ ಆಫ್ಘಾನಿಗರು ಶಿಳ್ಳೇ ಹಾಕಿ, ಘೋಷಣೆ ಕೂಗಿ ಭಾರತದ ಗೆಲುವನ್ನ ಸೆಲೆಬ್ರೇಟ್ ಮಾಡಿದ್ದಾರೆ.
ಈ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಅಂದ್ಹಾಗೆ ಕಳೆದ ಏಷ್ಯಾ ಕಪ್‌ನಲ್ಲಿ ಪಾಕ್ ಮತ್ತು ಅಫ್ಘಾನ್ ತಂಡಗಳ ನಡುವೆ ಮ್ಯಾಚ್ ನಡೀತಿದ್ದ ಟೈಂನಲ್ಲಿ ಉಭಯ ತಂಡಗಳ ಆಟಗಾರರ ಮಧ್ಯೆ ಭಾರಿ ಕಾಳಗ ನಡೆದಿತ್ತು. ಸ್ವತಃ ಆಟಗಾರರೇ ಕೈ ಕೈ ಮಿಲಾಯಿಸುವ ಹಂತ ತಲುಪಿದ್ರು. ಪಾಕ್ ಆಟಗಾರನೊಬ್ಬ ಆಫ್ಘಾನಿಸ್ತಾನ ಬೋಲರ್‌ಗೆ ಬ್ಯಾಟ್ ಮೂಲಕ ಹಲ್ಲೆಗೆ ಮುಂದಾಗಿದ್ದ.
ಈ ವೇಳೆ ದೊಡ್ಡ ಹೈಡ್ರಾಮ ನಡೆದಿತ್ತು. ಅದಾದ ಮೇಲೆ ಅತ್ತ ಎರಡೂ ತಂಡದ ಅಭಿಮಾನಿಗಳು ಪಂದ್ಯ ವೀಕ್ಷಣೆ ಮಾಡೋ ಸ್ಥಳದಲ್ಲಿಯೇ ಬಡಿದಾಡಿಕೊಂಡಿದ್ರು. ಅಫ್ಘಾನಿಗರು ಪಾಕ್ ಅಭಿಮಾನಿಗಳಿಗೆ ಅಟ್ಟಾಡಿಸಿ ಕೈಗೆ ಸಿಕ್ಕಿದ್ದನ್ನ ಹಿಡ್ಕೊಂಡು ಹಲ್ಲೆ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
ಅವತ್ತಿನಿಂದ ಪಾಕಿಗಳ ಮೇಲೆ ಅಫ್ಘಾನಿಗರಿಗೆ ಕ್ರಿಕೆಟ್ ಸೇಡು ಕೂಡ ಆರಂಭವಾಗಿದೆ. ಇನ್ನು ಭಾರತದ ಗೆಲುವಿಗೆ ಅತ್ತ ಜಗತ್ತಿನ ಟೆಕ್ ದೈತ್ಯ ಗೂಗಲ್ ಕಂಪನಿಯ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಕೂಡ ಪ್ರತಿಕ್ರಿಯಿಸಿದ್ದಾರೆ. ಕೊನೇ ಮೂರು ವೋವರ್‌ನಿಂದ ನಾನು ದೀಪಾವಳಿ ಹಬ್ಬವನ್ನ ಮತ್ತೆ ಸೆಲೆಬ್ರೇಟ್ ಮಾಡಿದ್ದೀನಿ ಅಂತ ಹೇಳಿಕೊಂಡಿದ್ದಾರೆ.
