
ನವದೆಹಲಿ: ಭಾರತ ಜಗತ್ತಿನ ಮಧುಮೇಹಿ ರೋಗಿಗಳ ರಾಜಧಾನಿಯಾಗಿ ಪರಿವರ್ತಿತವಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಭಾರತದ ಮಧು ಮೇಹಿ ಮಾರುಕಟ್ಟೆ 60 ಬಿಲಿಯನ್ ಡಾಲರ್ ಗೆ ( 6 ಸಾವಿರ ಕೋಟಿ) ತಲುಪಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ. ಸದ್ಯ 17 ಮಿಲಿಯನ್ ಮಧುಮೇಹಿ ಮಾರುಕಟ್ಟೆ ಮುಂದಿನ 10 ವರ್ಷಗಳ ಅವಧಿಯಲ್ಲಿ ಐದಾರು ಪಟ್ಟು ವಿಸ್ತರಣೆಯಾಗಲಿದೆ. ಬಡತನ ಮತ್ತು ಜೀವನ ಆರೋಗ್ಯ ಕ್ರಮದಲ್ಲಿನ ಏರು-ಪೇರುಗಳಿಂದ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಂಬುದು ಮಾರುಕಟ್ಟೆ ಅಧ್ಯಯನ ವರದಿಗಳಿಂದ ಲಭ್ಯವಾಗಿದೆ.
ಪ್ರತಿ ಭಾರತೀಯ ವಾರ್ಷಿಕವಾಗಿ 12 ಸಾವಿರ ರೂಪಾಯಿಗಳನ್ನು ಇದಕ್ಕಾಗಿ ವೆಚ್ಚ ಮಾಡುತ್ತಿದ್ದಾರೆ ಎಂದು ಮಾರುಕಟ್ಟೆ ಸಂಶೋಧನಾ ವರದಿ ಹೇಳಿದೆ. 30 ವರ್ಷ ವಯೋಮಾನದ ಮಧುಮೇಹಿಗಳು ವಾರ್ಷಿಕವಾಗಿ 6ಸಾವಿರ ವೆಚ್ಚ ಮಾಡುತ್ತಿದ್ದರೆ ಅವರು 60 ವರ್ಷಕ್ಕೆ ತಲುಪಿದಾಗ ವಾರ್ಷಿಕ ವೆಚ್ಚ 17 ಸಾವಿರ ರೂಪಾಯಿಗೆ ಏರಲಿದೆ. ಮಧುಮೇಹಿಗಳ ಪೈಕಿ ಶೇಕಡ 90ರಷ್ಟು ಜನ ಬಡವರು ಮತ್ತು ಮಧ್ಯಮವರ್ಗಕ್ಕೆ ಸೇರಿದವರಾಗಿದ್ದಾರೆ ಹೀಗಾಗಿ ತಮ್ಮ ಆದಾಯದ ಬಹುಪಾಲು ಹಣವನ್ನು ಇದಕ್ಕಾಗಿ ವೆಚ್ಚ ಮಾಡಬೇಕಿದೆ.
