Breaking NewsLatestರಾಷ್ಟ್ರೀಯಸುದ್ದಿ

ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮ ಆಚರಿಸಿ, ಶುಭಾಶಯ ತಿಳಿಸಿದ ಟೀಂ ಇಂಡಿಯಾ ಆಟಗಾರರು

ಜಿಂಬಾಬ್ವೆ ವಿರುದ್ಧದ ಮಹತ್ವದ ಪಂದ್ಯದಕ್ಕೆ ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ತಮ್ಮ 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಟೀಂ ಇಂಡಿಯಾ ಆಟಗಾರರು ಅಭ್ಯಾಸಕ್ಕೆ ತೆರಳುವ ಮುನ್ನ ಕೇಕ್ ಕತ್ತರಿಸಿ, ಕೊಹ್ಲಿ ಜನ್ಮದಿನವನ್ನು ಆಚರಿಸಿದ್ದಾರೆ.

ಮೆಲ್ಬೋರ್ನ್‌ನಲ್ಲಿ ತಂಡವು ವಿರಾಟ್ ಕೊಹ್ಲಿ ಅವರ ಜನ್ಮದಿನವನ್ನು ಹೇಗೆ ಆಚರಿಸಿರುವ ಫೋಟೊಗಳು ವೈರಲ್ ಆಗಿವೆ. ಭಾನುವಾರ (ನವೆಂಬರ್ 6) ನಡೆಯಲಿರುವ ತನ್ನ ಕೊನೆಯ ಸೂಪರ್ 12 ಹಣಾಹಣಿಯಲ್ಲಿ ಜಿಂಬಾಬ್ವೆಯನ್ನು ಎದುರಿಸಲು ಟೀಂ ಇಂಡಿಯಾ ಸಜ್ಜಾಗಿದೆ.

ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿದರೆ ಭಾರತ ಸೆಮಿಫೈನಲ್ ಸ್ಥಾನ ಖಚಿತವಾಗುತ್ತದೆ. ಕೊಹ್ಲಿ ಹುಟ್ಟುಹಬ್ಬದ ಪ್ರಯುಕ್ತ ಶನಿವಾರ ಸಂಜೆ ಮೆಲ್ಬೋರ್ನ್‌ನಲ್ಲಿ ಸಣ್ಣ ಮತ್ತು ವಿಶೇಷ ಪಾರ್ಟಿಯನ್ನು ಯೋಜಿಸಿದೆ. 34ನೇ ವರ್ಷಕ್ಕೆ ಕಾಲಿಟ್ಟಿರುವ ವಿಶೇಷ ಆಟಗಾರ ವಿರಾಟ್ ಕೊಹ್ಲಿಗೆ ಸಣ್ಣ ಡಿನ್ನರ್ ಪಾರ್ಟಿ. ಇಡೀ ತಂಡವು ಅವರ ಕುಟುಂಬಗಳೊಂದಿಗೆ ತಂಡದ ಭೋಜನಕ್ಕೆ ಹಾಜರಾಗಲಿದೆ.

Related Articles

Leave a Reply

Your email address will not be published. Required fields are marked *

Back to top button