Breaking NewsLatestಜಿಲ್ಲಾ ಸುದ್ದಿಬೆಳಗಾವಿ
ಮತಾಂತರ ನಿಷೇಧ ಕಾಯ್ದೆ: ಸುಪ್ರೀಂಕೋರ್ಟ್ ಮೆಟ್ಟಿಲೇರಲು ಕ್ರೈಸ್ತ ಒಕ್ಕೂಟ ನಿರ್ಧಾರ

ಬೆಳಗಾವಿ: ರಾಜ್ಯದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಭಾರತೀಯ ಕ್ರೈಸ್ತ ಒಕ್ಕೂಟ ತೀರ್ಮಾನಿಸಿದೆ. ಸಮುದಾಯದ ಮುಖಂಡರು,ಪಾದ್ರಿಗಳು ಮತ್ತಿತರ ಪ್ರಮುಖ ಸಭೆ ನಡೆಸಿ ಈ ಕುರಿತು ಶೀಘ್ರವೇ ತೀರ್ಮಾನಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.
ಈ ಸಂಬಂಧ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಒಕ್ಕೂಟದ ಕಾನೂನು ಸಲಹೆಗಾರ ರಮೇಶ್, ಕ್ರೈಸ್ತ ಸಮುದಾಯದ ಹೆಗಲ ಮೇಲೆ ಬಂದೂಕನ್ನು ಇಟ್ಟು ಹಿಂದುಳಿದ ವರ್ಗಗಳನ್ನು ಗುರಿ ಮಾಡುವ ಹುನ್ನಾರ ಇದರ ಹಿಂದಿದೆ ಎಂದು ಹೇಳಿದ್ದಾರೆ.
ಸಂವಿಧಾನದಲ್ಲಿ ಅಡಕವಾಗಿರುವ ವಾಕ್ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಅನುಸಾರ ಮತಾಂತರ ನಿಷೇಧ ಕಾಯ್ದೆಯ ಅನುಷ್ಠಾನದ ಪ್ರಸ್ತುತತೆ ಕುರಿತು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಗ್ರ ಪ್ರತಿಭಟನೆ ಬದಲು ಶಾಂತಿಯುತ ಹೋರಾಟ ಮೂಲಕ ನ್ಯಾಯ ಪಡೆಯಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.
