Breaking NewsLatestಕ್ರೀಡೆ
ಕಿವೀಸ್ ಗೆ ಗೆಲ್ಲಲು 53 ಓವರ್ ಗಳಲ್ಲಿ 139 ರನ್ ಗುರಿ

ಸೌಥ್ ಹ್ಯಾಂಪ್ಟನ್ : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಟ್ಟ ಗೆಲ್ಲಲು ನ್ಯೂಜಿಲೆಂಡ್ ಗೆ 53 ಓವರ್ ಗಳಲ್ಲಿ 139 ರನ್ ಗುರಿ ತಲುಪಬೇಕಾಗಿದೆ.
ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ 170 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 32 ರನ್ ಮುನ್ನಡೆ ಕಂಡಿದ್ದರಿಂದ ಟಾರ್ಗೆಟ್ 139 ರನ್. ಅಂತಿಮ ದಿನದಲ್ಲಿ ಇನ್ನು ಉಳಿದಿರುವುದು 53 ಓವರ್ ಆಗಿರುವುದರಿಂದ ನ್ಯೂಜಿಲೆಂಡ್ ಗೆ 139 ರನ್ ಜಯದ ಗುರಿ ಸಿಕ್ಕಿದೆ.
ಭಾರತದ ಎರಡನೇ ಇನಿಂಗ್ಸ್ ನಲ್ಲಿ ರಿಶಬ್ ಪಂತ್ 40 ರನ್ ಗಳಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು. ಮೊಹಮ್ಮದ್ ಶಮಿ (13) ಮತ್ತು ರವೀಂದ್ರ ಜಡೇಜಾ (16) ಉತ್ತಮ ರೀತಿಯಲ್ಲಿ ಪಂತ್ ಗೆ ಬೆಂಬಲ ನೀಡಿದರು.
ಕಿವೀಸ್ ಪರ ಟಿಮ್ ಸೌಥೀ (48ಕ್ಕೆ 4), ಟ್ರೆಂಟ್ ಬೌಲ್ಟ್ (39ಕ್ಕೆ 3) ಮತ್ತು ಕೆಯ್ಲ್ ಜೆಮೆಸನ್ (30ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶಿಸಿ ಭಾರತದ ರನ್ ಗಳಿಕೆಗೆ ಕಡಿವಾಣ ಹಾಕಿದರು. ಅಲ್ಪ ಮೊತ್ತವಾದ ಕಾರಣ ಕಿವೀಸ್ ಒತ್ತಡಕ್ಕೆ ಸಿಲುಕದೆ ಆಡಬೇಕಾಗಿದೆ.
