Breaking NewsLatestಕ್ರಿಕೆಟ್ಕ್ರೀಡೆ
India vs England: ಲೀಡ್ಸ್ ನಲ್ಲಿ ಇಂಗ್ಲೆಂಡ್ ಬೃಹತ್ ಲೀಡ್

ಲೀಡ್ಸ್ : ಜೋ ರೂಟ್ (121) ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ 345 ರನ್ ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಎರಡನೇ ದಿನದಾಟ ಮುಕ್ತಾಯಗೊಂಡಾಗ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 423 ರನ್ ಗಳಿಸಿದೆ. ಭಾರತ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್ ಗೆ ಸರ್ವ ಪತನ ಕಂಡಿತ್ತು.
ಇಂಗ್ಲೆಂಡ್ ನ ಆರಂಭಿಕ ಆಟಗಾರರಾದ ರಾಯ್ ಬರ್ನ್ಸ್ (61) ಹಾಗೂ ಹಸೀದ್ ಹಮೀದ್ (68) ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದ್ದರು. ನಂತರ ಡೇವಿಡ್ ಮಲಾನ್ (70) ಅವರ ಅರ್ಧ ಶತಕ ಬೃಹತ್ ಮೊತ್ತಕ್ಕೆ ಕಾರಣವಾಯಿತು.
ಭಾರತದ ಪರ ಮೊಹಮ್ಮದ್ ಶಮಿ (3) ಮತ್ತು ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಗಳಿಸಿದರು. ಇಂಗ್ಲೆಂಡ್ ಈ ಪಂದ್ಯ ಗೆಲ್ಲುವ ಫೇವರಿಟ್ ಎನಿಸಿದೆ.
ಇತ್ತೀಚಿನ ವರದಿ ಬಂದಾಗ ಇಂಗ್ಲೆಂಡ್ 432 ರನ್ ಗಳಿಗೆ ಆಲೌಟ್ ಆಗಿದ್ದು, ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 18 ರನ್ ಗಳಿಸಿದೆ.
