Breaking NewsLatestರಾಷ್ಟ್ರೀಯ

IT Raid: ದೈನಿಕ ಭಾಸ್ಕರ್ ಮಾಧ್ಯಮ ಸಮೂಹದ ಮೇಲೆ ಆದಾಯ ತೆರಿಗೆ ದಾಳಿ

ನವದೆಹಲಿ : ಜನಪ್ರಿಯ ಹಿಂದಿ ದಿನಪತ್ರಿಕೆ ‘ದೈನಿಕ್ ಭಾಸ್ಕರ್’ ಪತ್ರಿಕೆಯ ಮಾಲೀಕರಿಗೆ ಸೇರಿದ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಇಂದು ದಾಳಿ ನಡೆಸಿದೆ. ಕಂಪನಿಯ ಕಚೇರಿಗಳ ಮೇಲೂ ದಾಳಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

ದೈನಿಕ್ ಭಾಸ್ಕರ್‌ನ ನೋಯ್ಡಾ, ಜೈಪುರ ಮತ್ತು ಅಹಮದಾಬಾದ್ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಯಿತು. ಆರಂಭಿಕ ಮಾಹಿತಿ ಅನ್ವಯ ಇದು ಆದಾಯ ತೆರಿಗೆ ಇಲಾಖೆಯ ಪ್ರಮುಖ ದಾಳಿ ಮತ್ತು ಜಾರಿ ನಿರ್ದೇಶನಾಲಯದ ಜಂಟಿ ಕಾರ್ಯಾಚರಣೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ದಾಳಿ ವೇಳೆ ದೈನಿಕ್ ಭಾಸ್ಕರ್ ಕಚೇರಿಯಲ್ಲಿ ಹಾಜರಿದ್ದ ಎಲ್ಲ ನೌಕರರ ಫೋನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ, ಯಾರನ್ನೂ ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ವರದಿಯಾಗಿದೆ.

ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಬಹಿರಂಗಪಡಿಸಿದ್ದಕ್ಕಾಗಿ ತೆತ್ತ ಬೆಲೆ ಇದಾಗಿದೆ ಎಂದು ಪ್ರತಿ ಪಕ್ಷಗಳು ಟೀಕಿಸಿವೆ.

Spread the love

Related Articles

Leave a Reply

Your email address will not be published. Required fields are marked *

Back to top button