Breaking NewsLatestಜ್ಯೋತಿಷ್ಯಪರಿಹಾರಗಳು

ರೋಗ ನಿವಾರಣೆಗೆ ವಾಸ್ತು ಶಾಸ್ತ್ರದಲ್ಲಿ ಇದೆ ಪರಿಹಾರ

ಶರೀರದ ಯಾವ ಅಂಗದಲ್ಲಿ ರೋಗವಾಗಿರುತ್ತದೋ, ಆ ಅಂಗಕ್ಕೆ ಸಂಬಂಧಿಸಿದ ವರ್ಣದ ವಸ್ತ್ರದಲ್ಲಿ ಈ ಕೆಳಗೆ ಹೇಳಿದ ಸಾಮಾಗ್ರಿಗಳನ್ನು ಇರಿಸಿ, ಪೀಡಿತ ಅಂಗದ ಮೇಲೆ ಕಟ್ಟಿ, ಇಷ್ಟದೇವತೆಯ ಧ್ಯಾನ ಮಾಡುತ್ತ ನಿಧಾನವಾಗಿ ರೋಗ ಈ ವಸ್ತ್ರವನ್ನು ಪ್ರವೇಶಿಸುತ್ತಿದೆ. ಪೂರ್ಣ ಆರೋಗ್ಯ ಹೊಂದುತ್ತಿದ್ದೇನೆ. ನನಗೆ ಬಂದಿರುವ ಕಾಯಿಲೆಯನ್ನು ನಿನ್ನೊಳಗೆ ಅಡಗಿಸಿಟ್ಟುಕೊ ಎಂದು ಪ್ರಾರ್ಥಿಸುತ್ತೇನೆ; ಈ ಪ್ರಕಾರ ಪ್ರಾರ್ಥನೆ ಮಾಡಬೇಕು. ಈ ಪ್ರಯೋಗವನ್ನು ರವಿವಾರ ಮಧ್ಯಾಹ್ನ 12 ಗಂಟೆಗೆ ಮಾಡಬೇಕು. ಹೇಳಿದ ವಸ್ರ್ತವನ್ನು ಸಾಮಗ್ರಿ ಸಹಿತ ಪೀಡಿತ ಅಂಗದ ಮೇಲೆ ಕಟ್ಟಬೇಕು. ಮಂಗಳವಾರದಂದು ಆ ವಸ್ರ್ತದ ಗಂಟನ್ನು ತೆಗೆದು ಪೀಡಿತನ ಮೇಲೆ ನಿವಾಳಿಸಿ ವೃತ್ತವೊಂದರಲ್ಲಿ ಎಸೆದು ಬರಬೇಕು.

  1. ಬಾಯಿರೋಗ- ಶ್ವೇತವರ್ಣದ ವಸ್ತ್ರದಲ್ಲಿ ಜೀರಿಗೆ ಕಟ್ಟಬೇಕು
  2. ಸ್ನಾಯು ವಿಕಾರ ಅಥವಾ ಶ್ವಾಸರೋಗ- ಕಪ್ಪು ವರ್ಣದ ವಸ್ತ್ರದಲ್ಲಿ ಜೀರಿಗೆ ಕಟ್ಟಬೇಕು
  3. ಹಸ್ತಗಳ ರೋಗ- ಜಾಂಬಳ ವಸ್ತ್ರದಲ್ಲಿ ಇಂಗನ್ನು ಕಟ್ಟಬೇಕು
  4. ಸೊಂಟದ ರೋಗ- ಹಸಿರು ವರ್ಣದ ವಸ್ತ್ರದಲ್ಲಿ ಏಲಕ್ಕಿಯನ್ನು ಕಟ್ಟಬೇಕು
  5. ಹೃದಯರೋಗ- ನೀಲಿವರ್ಣದ ವಸ್ತ್ರದಲ್ಲಿ ಕಟ್ಟಬೇಕು

Related Articles

Leave a Reply

Your email address will not be published. Required fields are marked *

Back to top button