Breaking NewsLatestರಾಜ್ಯಸುದ್ದಿ
ಮತಾಂತರ ನಿಷೇಧ : ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ

ಬೆಳಗಾವಿ : ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ಮಂಡಿಸಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ-2021 ಕುರಿತು ವಿಧಾನಸಭೆಯಲ್ಲಿ ಗರ್ಮಾಗರಂ ಚರ್ಚೆ ನಡೆದಿದೆ. ಗುರುವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ವಿಧೇಯಕದ ಕುರಿತು ಚರ್ಚೆಗೆ ಚಾಲನೆ ನೀಡಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ, ವಿಧೇಯಕದ ಉದ್ದೇಶ ಮತ್ತು ಶಿಕ್ಷೆಯ ಪ್ರಮಾಣ ಕುರಿತು ವಿವರಣೆ ನೀಡಿದರು.
ವಿಧೇಯಕದ ಅನ್ವಯ ಮತಾಂತರವಾಗಲು ಅವಕಾಶ ಇದೆ. ಆದರೆ, 31 ದಿನಗಳ ಮುನ್ನ ಜಿಲ್ಲಾಧಿಕಾರಿಗೆ ತಿಳಿಸಿ ಮತಾಂತರವಾಗಬಹುದು. ಮತಾಂತವಾಗ ಬಯಸುವ ವ್ಯಕ್ತಿ ಜಿಲ್ಲಾಧಿಕಾರಿ ಮುಂದೆ ಹಾಜರಾದರೆ ಜಿಲ್ಲಾಡಳಿತ ವಿಷಯವನ್ನು ನೊಟೀಸ್ ಬೋರ್ಡ್ ನಲ್ಲಿ ಹಾಕಬೇಕು ಎಂದರು.
ಬಲವಂತದ ಮತಾಂತರವಾದರೆ ಕಾನೂನು ಕ್ರಮಕೈಗೊಳ್ಳಲು ವಿಧೇಯಕ ಅವಕಾಶ ಕಲ್ಪಿಸುತ್ತದೆ. ಬಲವಂತದ ಮತಾಂತರವಾಗಿ ಮದುವೆಯಾದರೆ ಅದು ಅಸಿಂಧುವಾಗುತ್ತದೆ. ಜಾಮೀನುರಹಿತ ಪ್ರಕರಣವಾಗುತ್ತದೆ ಎಂದು ಹೇಳಿದರು.
